ಮಡಿಕೇರಿ, ಡಿ. 12: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವರ ಹಳೆಯ ಸಾಂಪ್ರದಾಯಿಕ ಸಾಮಗ್ರಿ (ಕೊಡವ ಸಂಸ್ಕøತಿಕ್ ಅಡಂಗ್‍ನ ಪಂಡೇತ್‍ರ ಸಾಮಗ್ರಿ)ಗಳನ್ನು ಸಂಗ್ರಹಿಸಿ ಅಕಾಡೆಮಿ ಕಚೇರಿಯಲ್ಲಿ ಸಂಗ್ರಹಾಲಯ (ಮ್ಯೂಸಿಯಂ)ನ್ನು ಮಾಡಲು ಮುಂದಾಗಿರುವುದರಿಂದ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಯಾವುದೇ ಹಳೆಯ ಸಾಂಪ್ರದಾಯಿಕ ಸಾಮಗ್ರಿಗಳಾದ ನೂಪುಟ್ಟ್‍ವರ, ಬರ್ಚಿ, ಮೊರ, ವನಕೆ ಮತ್ತಿತರ ಇದ್ದಲ್ಲಿ ಅಕಾಡೆಮಿ ಕಚೇರಿಗೆ ಒಪ್ಪಿಸುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.