*ಗೋಣಿಕೊಪ್ಪಲು, ಡಿ. 12: ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ದಿವಂಗತ ಗಂಗಾಧರ್ ಶೇಟ್ ಹಾಗೂ ಸುಲೋಚನಮ್ಮ ಜ್ಞಾಪಕಾರ್ಥವಾಗಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ದತ್ತಿ ಉಪಾನ್ಯಾಸ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಲಿದೆ. ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರಾದಾಶ್ರಮದ ಸಂಭವನಂದಾಜೀ ಸಭಾಂಗಣದಲ್ಲಿ ತಾ. 13 ರಂದು (ಇಂದು) ಬೆಳಿಗ್ಗೆ 10.30ಕ್ಕೆ ಪೆÇನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಂದಾಜೀ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಕೆ.ಎನ್. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್‍ಸಾಗರ್ ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕಾವೇರಿ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ಎಂ.ಬಿ. ಕಾವೇರಪ್ಪ ಮುಖ್ಯ ಅತಿಥಿಗಳಾಗಿ ದತ್ತಿ ದಾನಿ ಗಳಾದ ಎಂ.ಜಿ. ಮೋಹನ್ ಹಾಗೂ ಸುಗ್ಗಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಳುವಂಗಡ ಕಾವೇರಿ ಉದಯ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶ್ರೀಮಂಗಲ ಕಸಾಪ ಹೋಬಳಿ ಅಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ, ಗೌರವ ಉಪಸ್ಥಿತಿಯಲ್ಲಿ ಕಾವೇರಿ ಕಾಲೇಜು ಉಪನ್ಯಾಸಕಿ ಡಾ. ರೇವತಿ ಪೂವಯ್ಯ ಹಾಗೂ ಕವಿಗಳಾದ ನಲ ವಿಜಯ, ಅರ್ಪಣಾ ಹುಲಿತಾಳ್, ತೀರ್ಥಕುಮಾರ್ ಉಪಸ್ಥಿತರಿರುತ್ತಾರೆ.