ಗೋಣಿಕೊಪ್ಪಲು.ಡಿ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಸಗೂರುವಿನ ಬಾಚಮಾಡ ಐನ್ ಮನೆಯಲ್ಲಿ ಹಿರಿಯ ಸಾಹಿತಿ, ‘ಬಾಚಮಾಡ ಡಿ. ಗಣಪತಿ ಅವರ ನೂರಾಂಡ್ ನಮ್ಮೆ' ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಹಸಿರು ಪ್ರಕೃತಿಯ ನಡುವೆ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಗಣಪತಿಯವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸೇವೆಯನ್ನು ಮೆಲುಕು ಹಾಕಲಾಯಿತು.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ, ಬಿ.ಡಿ ಗಣಪತಿ ಅವರ ಸಾಧನೆಯನ್ನು ಅಮರವಾಗಿಡಲು ಇವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆಯಾಗಬೇಕು, ಮುಖ್ಯ ಪಟ್ಟಣದಲ್ಲಿರುವ ರಸ್ತೆಗಳಿಗೆ ಇವರ ಹೆಸರು ನಾಮಕರಣವಾಗಬೇಕು, ಹೀಗಾದಲ್ಲಿ ಇವರ ಹೆಸರು ಶಾಶ್ವತ ವಾಗಿ ಉಳಿಯಲು ಸಾಧ್ಯವಾಗಲಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ಮಾಚಿಮಾಡ ರವೀಂದ್ರ ಮಾತನಾಡಿ, ಕೊಡಗು ರಾಜ್ಯ ಇದ್ದ ಸಂದರ್ಭದಲ್ಲಿ 24 ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸ ಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಜಿಲ್ಲೆಗೆ ಮೂರು ಸ್ಥಾನಗಳು ಲಭ್ಯವಾದವು ಇದೀಗ 2 ಸ್ಥಾನಕ್ಕೆ ಮೀಸಲಾಗಿದೆ. ಮುಂದೊಂದು ದಿನ ಒಂದು ವಿಧಾನಸಭೆಯ ಸ್ಥಾನ ಬಂದರು ಅಚ್ಚರಿಪಡಬೇಕಾಗಿಲ್ಲ. ಈ ನಿಟ್ಟಿನಲ್ಲಿ ಕೊಡಗಿನ ಜನತೆ ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು. ಜಿಲ್ಲೆಗೆ ಸಂಸದರ ಸ್ಥಾನ ನೀಡಲು ಒತ್ತಾಯವಾಗಬೇಕು ಎಂದರು.

ಮುಖ್ಯ ದ್ವಾರವನ್ನು ನಲ್ಲೂರು ಗ್ರಾಮದ ಕಾಫಿ ಬೆಳೆಗಾರ ತೀತರಮಾಡ ಶಶಿ ಗಣಪತಿ ಉದ್ಘಾಟಿಸಿದರು. ಬಾಚಮಾಡ ಕುಟುಂಬದ ಪಟ್ಟೆದಾರ ಬಾಚಮಾಡ ಚಿಣ್ಣಪ್ಪ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೀತರಮಾಡ ಲಾಜ್ ಶತಮಾನೋತ್ಸವದ ಸಂಚಿಕೆ ಬಿಡುಗಡೆ ಗೊಳಿಸಿದರು.

(ಮೊದಲ ಪುಟದಿಂದ) ನಾ ಕಂಡ ಬಿ.ಡಿ.ಗಣಪತಿ ಎಂಬ ವಿಷಯ ಕುರಿತು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಉಳ್ಳಿಯಡ ಎಂ.ಪೂವಯ್ಯ ವಿಷಯ ಮಂಡನೆ ಮಾಡಿದರು. ನಿವೃತ್ತ ಶಿಕ್ಷಕಿ ಕುಂಞಂಗಡ ಯಶೋದ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸಾಹಿತ್ಯ ಅಕಾಡೆಮಿಯು ಹಲವು ಕಾರ್ಯಕ್ರಮ ನಡೆಸುವ ಮೂಲಕ ಕಲೆ, ಸಂಸ್ಕøತಿ ಉಳಿಸುವ ಕೆಲಸ ಮಾಡುತ್ತಿದೆ. ಬಿ.ಡಿ ಗಣಪತಿ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಐನ್‍ಮನೆಯ ವಿಚಾರ ಸಂಕೀರ್ಣಗಳನ್ನು ನಡೆಸುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಇದರಿಂದ ಸಂಶೋಧನೆ ಮಾಡುವವರಿಗೆ ಅನುಕೂಲವಾಗಲಿದೆ. ಗಣಪತಿ ಅವರ ಆದರ್ಶ ವ್ಯಕ್ತಿತ್ವ ಇವರು ಬರೆದ ನಲವತ್ತು ಪುಸ್ತಕಗಳಿಂದ ನೋಡಬಹುದಾಗಿದೆ. ಇವರ ಪುಸ್ತಕಗಳನ್ನು ಅಕಾಡೆಮಿ ವತಿಯಿಂದ ಮರುಮುದ್ರಣ ಮಾಡುವ ಮೂಲಕ ಇವರ ಸೇವೆಯನ್ನು ಸಮಾಜಕ್ಕೆ ತೋರಿಸಿಕೊಡುವ ಕೆಲಸ ಅಕಾಡೆಮಿ ವತಿಯಿಂದ ನಡೆಯಲಿದೆ ಎಂದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಪಿ.ಕೆ.ಪೆÇನ್ನಪ್ಪ, ಕಾಟಿಮಾಡ ಜಿಮ್ಮಿ, ಕಾಫಿ ಬೆಳೆಗಾರ ಕರ್ತಂಗಡ ವಿಶ್ವನಾಥ್, ರಿಜಿಸ್ಟರ್ ಅಜ್ಜಿಕುಟ್ಟಿರ ಸಿ.ಗಿರೀಶ್, ಸಂಚಾಲಕ ಪಡಿಞರಂಡ ಎ.ಪ್ರಭುಕುಮಾರ್, ಮಾಚಿಮಾಡ ಜಾನಕಿ ಮಾಚಯ್ಯ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಬೆಸಗೂರು ಮಂದತ್ವ ಸಾಂಸ್ಕøತಿಕ ಸೇವಾ ಟ್ರಸ್ಟ್ ತಂಡ ನಡೆಸಿಕೊಟ್ಟ ಗೆಜ್ಜೆತಂಡ್, ಕೋಲಾಟ ಕಾರ್ಯಕ್ರಮ ಗಮನ ಸೆಳೆಯಿತು. ಕರ್ತಂಗಡ ವಿಶ್ವನಾಥ್ ಪ್ರಾರ್ಥಿಸಿ, ಪ್ರಭುಕುಮಾರ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

- ಹೆಚ್.ಕೆ.ಜಗದೀಶ್