ಗೋಣಿಕೊಪ್ಪ ವರದಿ, ಡಿ. 13: ಬಿಜೆಪಿ ವೀರಾಜಪೇಟೆ ತಾಲೂಕು ಯುವ ಮೋರ್ಚಾದಿಂದ ಇಲ್ಲಿನ ದುರ್ಗಾ ಬೋಜಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಗೊಂದಲಗಳಿಲ್ಲದೆ ಚುನಾವಣೆ ಎದುರಿಸಲು ಹೊಂದಾಣಿಕೆ ಮೂಲಕ ಮುಂದುವರಿಯುವಂತೆ ಅಧ್ಯಕ್ಷ ಕವನ್ ಕಾರ್ಯಪ್ಪ ಮನವಿ ಮಾಡಿಕೊಂಡರು.

ತಾಲೂಕು ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಉಪಾಧ್ಯಕ್ಷ ಬೊಳಕಾರಂಡ ಗಗನ್ ಗಣಪತಿ, ಪಟ್ರಂಗಡ ಪೆÇನ್ನಣ್ಣ ರಂಜನ್, ಪ್ರಧಾನ ಕಾರ್ಯದರ್ಶಿ ಭರತ್, ಕಾರ್ಯದರ್ಶಿ ವಿಪಿನ್ ತಿಮ್ಮಯ್ಯ, ಪ್ರಧಾನ್ ಬೋಪಣ್ಣ, ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಚಂಗಪ್ಪ, ಜಿಲ್ಲಾ ಕಾರ್ಯದರ್ಶಿ ತಾತಂಡ ಹಿತೇಶ್ ಮುತ್ತಪ್ಪ ಇದ್ದರು.