ಕೂಡಿಗೆ, ಡಿ. 13: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ತೊರೆನೂರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಸಂಘವು ಹೊಸ ಆಡಳಿತ ಮಂಡಳಿಯನ್ನು ಹೊಂದಿದ್ದು, ಈಗಾಗಲೇ ವಿವಿಧ ಯೋಜನೆಯನ್ನು ಹಮ್ಮಿಕೊಳ್ಳುವುದರ ಮುಖೇನ ರೈತರಿಗೆ ಅನುಕೂಲವಾಗುವಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಾ ವ್ಯವಹಾರ ನಡೆಸಿ ಈ ಸಾಲಿನಲ್ಲಿ ರೂ. 12 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.
ಅಲ್ಲದೆ ಸಂಘದ ವ್ಯಾಪ್ತಿಯ ಕೂಡಿಗೆ, ಡಿ. 13: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ತೊರೆನೂರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಸಂಘವು ಹೊಸ ಆಡಳಿತ ಮಂಡಳಿಯನ್ನು ಹೊಂದಿದ್ದು, ಈಗಾಗಲೇ ವಿವಿಧ ಯೋಜನೆಯನ್ನು ಹಮ್ಮಿಕೊಳ್ಳುವುದರ ಮುಖೇನ ರೈತರಿಗೆ ಅನುಕೂಲವಾಗುವಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಾ ವ್ಯವಹಾರ ನಡೆಸಿ ಈ ಸಾಲಿನಲ್ಲಿ ರೂ. 12 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.
ಅಲ್ಲದೆ ಸಂಘದ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ರಸಗೊಬ್ಬರ, ಕೀಟನಾಶಕ ಔಷಧಿಗಳು, ಚಿನ್ನಾಭರಣ ಸಾಲ, ದ್ವಿಚಕ್ರ ವಾಹನ ಸಾಲ ಸೇರಿದಂತೆ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ಮತ್ತು ಹೈನುಗಾರಿಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ರಿಯಾಯಿತಿ ಬಡ್ಡಿಯಲ್ಲಿ ಸಾಲವನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಅಲ್ಲದೆ ಮುಂದಿನ ದಿನಗಳಲ್ಲಿ ಸಂಘದ ಕಟ್ಟಡವನ್ನು ರೂ. 15 ಲಕ್ಷ ವೆಚ್ಚದಲ್ಲಿ ಆಧುನೀಕರಿಸಲಾಗುತ್ತದೆ, ಇದರ ಉದ್ಘಾಟನೆಯನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.
2019-20ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಕಾರ್ಯದರ್ಶಿ ಪ್ರೀತು ಪ್ರಸಾದ್ ವಾಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಡಿ.ಆರ್. ಪ್ರೇಮ್ಕುಮಾರ್, ನಿರ್ದೇಶಕರಾದ ಟಿ.ಕೆ. ಕುಮಾರ್, ಹೆಚ್.ಟಿ. ಕುಶಾಲಪ್ಪ, ಹೆಚ್.ಬಿ. ಚಂದ್ರಪ್ಪ, ಟಿ.ಕೆ. ಪಾಂಡುರಂಗ, ಟಿ.ಪಿ. ಪ್ರಸನ್ನ, ಹೆಚ್.ಆರ್. ಭಾಗ್ಯ, ಟಿ.ಎಂ. ಲಲಿತ, ಟಿ.ಜಿ. ಲೋಕೇಶ್, ಟಿ.ಸಿ. ಶಿವಕುಮಾರ್, ಟಿ.ಜಿ. ಶ್ರೀನಿವಾಸ, ಸಂಘದ ಮೇಲ್ವಿಚಾರಕರಾದ ಹೆಚ್.ಬಿ. ಸುಮಂತ್, ಹೆಚ್.ಟಿ. ನವೀನ್ ಕುಮಾರ್, ಕುಮಾರ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ. ಪ್ರೀತು ಪ್ರಸಾದ್ ಸೇರಿದಂತೆ ಈ ವ್ಯಾಪ್ತಿಯ ನೂರಾರು ಸಂಘದ ಸದಸ್ಯರು ಭಾಗವಹಿಸಿದ್ದರು.