ನಾಪೆÉÇೀಕ್ಲು, ಡಿ. 13: ನಾಪೆÇೀಕ್ಲು ಕಲ್ಲೇಂಗಡ ಕುಟುಂಬದ ಅಭಿವೃದ್ಧಿ ಫಂಡಿನ ವಾರ್ಷಿಕ ಮಹಾಸಭೆ ಕುಟುಂಬದ ಗುರು ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಮೀನುಗಾರಿಕೆ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ಬನ್ಸಿ ಬೋಪಣ್ಣ, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಿ.ಡಿ.ಸಿ. ಆಗಿ ಬಡ್ತಿ ಹೊಂದಿದ ಕಾರ್ಯಪ್ಪ ಮತ್ತು ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್‍ನಲ್ಲಿ ಎಂ.ಸಿ.ಎ.ಯಲ್ಲಿ ಚಿನ್ನದ ಪದÀಕ ಪಡೆದ ಚೇತನ್ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕಲ್ಲೇಂಗಡ ತಮ್ಮಿ ತಮ್ಮಯ್ಯ ವಹಿಸಿದ್ದರು. ನಂತರ ಗುರುವಿಗೆ ಎಡೆ ಇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ ಕುಟುಂಬದ ಹಿರಿಯರಾದ ಪೂವಯ್ಯ, ಸುಬ್ಬಯ್ಯ, ಬೋಪಣ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ಅಚ್ಚಪ್ಪ, ಕಾವೇರಿಯಪ್ಪ, ಗಣಪತಿ, ಕುಟ್ಟಪ್ಪ, ತಂಗಮ್ಮ, ಕರುಂಬಯ್ಯ, ಶಾಂತಿ ಮತ್ತಿತರರು ಇದ್ದರು.