ಕೂಡಿಗೆ, ಡಿ. 13 : ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆದ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರಕಿದ್ದರಿಂದ ಈಬಾರಿ ಜೋಳ ಬೆಳೆಯುವ ಹೂಲ ಮತ್ತು ನಾಟಿ ಮಾಡುವ ಗದ್ದೆಗಳಲ್ಲಿ ಶುಂಠಿ ಬೆಳೆ ಹೆಚ್ಚಾಗಿ ಬೆಳೆಯಲಾಗಿತ್ತು. ಅದರೆ ಈ ಭಾರಿ ಶುಂಠಿ ಬೆಳೆಗೆ ಸಮರ್ಪಕವಾದ ಬೆಲೆಯಿಲ್ಲದೆ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ ಇದರ ಜೊತೆಯಲ್ಲಿ ಅಂತರ ರಾಜ್ಯ ಶುಂಠಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಾಗಿ ಜಿಲ್ಲೆಯ ಶುಂಠಿ ಬೆಳೆಗಾರರು ಬಾರಿ ನಷ್ಟ ಅನುಭವಿಸುವಂತ ಪ್ರಸಂಗ ಎದುರಾಗಿದೆ.
ಜಿಲ್ಲೆಯ ಅನೇಕ ರೈತರು ಕಳೆದ ಸಾಲಿನಂತೆ ಈ ಬಾರಿ ಉತ್ತಮವಾದ ಬೆಲೆ ಸಿಗುವ ಆಸೆಯಲ್ಲಿ ಅಧಿಕವಾದ ಬೆಲೆಯನ್ನು ಬೀಜದ ಶುಂಠಿಗೆ ನೀಡಿ ಖರೀದಿಸಿದ್ದರು. ಬೇರೆ ಜಮೀನನ್ನು ಗುತ್ತಿಗೆ ಪಡೆದು ಬೋರ್ವೆÀಲ್ ನೀರಿಗೂ ಹಣವನ್ನು ನೀಡಿ ಬೇಸಾಯ ಮಾಡಲಾಗಿತ್ತು. ಬೆಳೆಯು ಸಹ ಹವಾಮಾನಕ್ಕೆ ಅನುಗುಣವಾಗಿ ಉತ್ತಮವಾಗಿ ಬಂದಿತ್ತಾದರೂ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
ಈ ಬಾರಿ ಬೆಳೆಗೆ ರೋಗ ಕಡಿಮೆ ಇದ್ದು ಬೆಳೆ ಹುಲಸಾಗಿ ಬಂದು ಒಂದು ವರ್ಷಗಳು ಕಳೆಯುತ್ತಾ ಬಂದರೂ ಸಹ ಬೆಲೆಯಲ್ಲಿ ಏರಿಕೆ ಮಾತ್ರ ಆಗಿಲ್ಲ. ಕಳೆದ ಮೂರು ತಿಂಗಳುಗಳಿಂದ ಶುಂಠಿ ಒಂದು ಮೂಟೆಗೆ ಕೇವಲ 700ರಿಂದ800 ರೂ ಗಳು ಮಾತ್ರ ಅಗಿದೆ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ ಬೆಳೆ ಹಾಗೆ ಇದೆ. ಈ ಸಾಲಿನ ಬೇಸಾಯಕ್ಕೆ ಖರ್ಚು ಮಾಡಿದ ಅರ್ಧದಷ್ಟು ಹಣವು ಸಿಗುತ್ತಿಲ್ಲಾ ಎಂಬುದು ರೈತರ ಅಳಲಾಗಿದೆ.
ಅಂತರರಾಜ್ಯ ಮಾರುಕಟ್ಟೆಗಳಾದ ದೆಹಲಿ ಜಯಪುರ ಅಹಮದಾಬಾದ್ ಸೇರಿದಂತೆ ಉತ್ತರ ಭಾರತದ ಶುಂಠಿ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಪೆÇರೃಕೆ ಹೆಚ್ಚಾಗಿ ಅಲ್ಲಿನ ಮಾರುಕಟ್ಟೆಯಲ್ಲಿ ಒಂದು ಕೆ ಜಿ ಶುಂಠಿ ಬೆಲೆ ಕೇವಲ 24 ರೂ ಇದೆ ಎನ್ನುತ್ತಾರೆ ಜಿಲ್ಲೆಯ ಶುಂಠಿ ವ್ಯಾಪಾರಿಗಳು.
ಕಳೆದ ಬಾರಿ ಬೇಸಾಯ ಮಾಡಿದ ಶುಂಠಿ ಬೆಳೆಯನ್ನು ಇನ್ನೂ ಕೀಳಲಾಗಿಲ್ಲ ಆದರೆ ಮುಂದಿನ ಶುಂಠಿ ಬೇಸಾಯ ಮಾಡುವ ಸಮಯ ಹತ್ತಿರ ಬರುತ್ತಿದೆ. ಶುಂಠಿ ಬಿತ್ತನೆ ಬೀಜ. ಮಾರಾಟ ಮಾಡಲು ಪ್ರಾರಂಭ ಆದಾಗ ಸ್ವಲ್ಪ ಮಟ್ಟಿಗೆ ಬೆಲೆ ಬಂದರೆ ಹೇಗೋ ಖರ್ಚು ಮಾಡಿದ ಹಣ ಸೀಗಬಹುದೆಂಬ ಆಸೆಯಲ್ಲಿ ರೈತರು ಇದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ