ಪೆÇನ್ನಂಪೇಟೆ. ಡಿ.13: ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ, ದಿ. ಸುಲೋಚನಮ್ಮ ಮತ್ತು ದಿ. ಗಂಗಾಧರ ಶೇಟ್ ಜ್ಞಾಪಕಾರ್ಥ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಮತ್ತು ಕೊಡಗಿನ ಸ್ವಾತಂತ್ರ ಹೋರಾಟಗಾರರ ನೆನಪಿನ ದತ್ತಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಬೋಧ ಸ್ವರೂಪಾನಂದ ಮಹಾರಾಜ್ ನೆರವೇರಿಸಿದರು.

ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಡಾ. ಚಂದ್ರ ಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಯ ನುಡಿಯಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಲೋಕೇಶ್ ಸಾಗರ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯ ಬಹುಮಾನವನ್ನು ಘೋಷಣೆ ಮಾಡಿದ ನಂತರ ಕೊಡಗಿನಲ್ಲಿ 125 ಕ್ಕೆ 125 ಅಂಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ಈ ರೀತಿಯ ಪೆÇ್ರೀತ್ಸಾಹಗಳು ಕನ್ನಡದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದರು. ವೀರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ರೇವತಿ ಪೂವಯ್ಯ, ಕೊಡಗಿನ ಸ್ವಾತಂತ್ರ ಹೋರಾಟಗಾರ, ದಿವಂಗತ ಚೆಕ್ಕೇರ ಮೊಣ್ಣಯ್ಯ ಅವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭ ಕವಯತ್ರಿ ಉಳುವಂಗಡ ಕಾವೇರಿ ಉದಯ, ವೀರಾಜಪೇಟೆ ಕಾವೇರಿ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ. ರೇವತಿ ಪೂವಯ್ಯ, ಕವಿಗಳಾದ ನಲ ವಿಜಯ ಹಾಗೂ ತೀರ್ಥೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಎಂ.ಜಿ ಮೋಹನ್, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ, ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಮಿ ಸುಬ್ಬಯ್ಯ ಇನ್ನಿತರರು ಹಾಜರಿದ್ದರು.

ಕವಯಿತ್ರಿ ಉಳುವಂಗಡ ಕಾವೇರಿ ಉದಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಗ್ಗಿ ಕವಿ ಗೋಷ್ಠಿಯಲ್ಲಿ ಪಿ. ಎಸ್. ವೈಲೇಶ್, ಕೆ. ಜಶ್ಮಿ, ಎಂ.ಬಿ. ಜಯಲಕ್ಷ್ಮಿ, ನ.ಲ.ವಿಜಯ, ವಿದ್ಯಾ ಜಗದೀಶ್ ಪುತ್ತಾಮನೆ, ರಂಜಿತ, ಕೇಡನ ಪ್ರಗತಿ, ಸುಮಿ ಸುಬ್ಬಯ್ಯ, ವತ್ಸಲ ಶ್ರೀಶ, ಸುಕುಮಾರ್ ತೊರೆನೂರು , ಕುಮಾರ, ರಾಣಿ ರಾಮಕೃಷ್ಣ , ಡಾ. ಎ. ಎಸ್. ಪೂವಮ್ಮ , ಚಿತ್ರ ವೇಣುಗೋಪಾಲ್, ತೀರ್ಥೇಶ್ ಕುಮಾರ್ ಇವರುಗಳು ಕವನ ವಾಚಿಸಿದರು.