ಸೋಮವಾರಪೇಟೆ, ಡಿ. 11: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಬ್ಬರಿಗೆ ವಾರ್ಷಿಕ ಶಾಲಾ ಶುಲ್ಕವನ್ನು ಭರಿಸುವ ಮೂಲಕ, ವಿದ್ಯಾರ್ಥಿಗಳಿಗೆ ನೆರವು ಒದಗಿಸಲಾಯಿತು.
ಜ್ಞಾನವಿಕಾಸ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರಾದ ಪ್ರೇಮ ಹೃಷಿಕೇಶ್ ಮತ್ತು ಭಾಗ್ಯ ಕೃಷ್ಣ ಅವರುಗಳು ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಿದರು. ಈ ಸಂದರ್ಭ ಕ್ಲಬ್ನ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಉಪಾಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ತನ್ಮಯಿ ಪ್ರವೀಣ್, ಪದಾಧಿಕಾರಿಗಳಾದ ಸೌಮ್ಯ ಸತೀಶ್, ಕಾವೇರಿ ಸುರೇಶ್, ಲತಾ ನಾಗೇಶ್ ಉಪಸ್ಥಿತರಿದ್ದರು.