ನಾಪೋಕ್ಲು, ಡಿ. 11: ಕೊಡಗು ಅರೆಭಾಷಿಕ ಗೌಡರು ಹುತ್ತರಿ ಹಬ್ಬವನ್ನು ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಿದರು. ಬೆಂಗಳೂರಿನ ಕೊಡಗು ಗೌಡ ಸಮಾಜ ಹಾಗೂ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ನಡೆದ ವರ್ಚುವಲ್ ಹುತ್ತರಿ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ವಿಜೇತರು

ಕಪಲ್ ಚಾಲೆಂಜ್ ನೃತ್ಯ ಸ್ಪರ್ಧೆಯಲ್ಲಿ ಕುಡೆಕಲ್ ಸುರಕ್ಷಾ ಸಂತೋಷ್ ಹಾಗೂ ನಿಹಾಲ್ ಸಂತೋಷ್, ಅಣ್ಣೆಚ್ಚಿರ ಲಕ್ಷ್ಮಣ್ ಹಾಗೂ ಇಂದಿರಾ ಲಕ್ಷ್ಮಣ್ ಪ್ರಥಮ ಸ್ಥಾನ ಪಡೆದರು. ಕೋಚನ ವಚನ್ ಹಾಗೂ ಚಲನ ಮತ್ತು ಅಮೆಮನೆ ಶ್ವೇತಾ ಹಾಗೂ ಕಾವ್ಯ ತೃತೀಯ ಸ್ಥಾನಗಳಿಸಿದರು. ಸಿಂಗಲ್ಸ್ ಕಿಡ್ಸ್ ಚಾಲೆಂಜ್‍ನಲ್ಲಿ ಪುದಿಯನೆರವನ ಪಂಚಮಿ, ಹೊಸೊಕ್ಲು ನಿಧಿ ಉದಯ್ ಪ್ರಥಮ ಸ್ಥಾನವನ್ನು ಹಾಗೂ ಕೇನೇರ ಹಿತ ನಿತಿನ್ ನಾಟೋಳನ ಯುಕ್ತಿಮಧು, ಕೂಟುಮಣಿಯನ ಪ್ರತೀಕ್ಷ ದ್ವಿತೀಯ ಸ್ಥಾನವನ್ನು ಪಡೆದರು. ಸಿಂಗಲ್ಸ್ ಹಿರಿಯರ ವಿಭಾಗದಲ್ಲಿ ಕಡ್ಲೇರ ಪ್ರವೀಣ್ ಪ್ರಥಮ ಸ್ಥಾನವನ್ನು, ಪೊನ್ನಚ್ಚನ ಪ್ರವೀಣ್ ಪಡೆದರೆ, ದ್ವಿತೀಯ ಸ್ಥಾನವನ್ನು ನಡುಗಲ್ಲು ಜಯಂತಿ ಕೂಡಕಂಡಿ ಲಕ್ಷ್ಮಣ್, ಹೊಸೊಕ್ಲು ಪುಷ್ಪಾವತಿ ಮೊಣ್ಣಪ್ಪ ಹಂಚಿಕೊಂಡರು.

ಟ್ರ್ರಷರ್ ಹಂಟ್ ವಿಭಾಗದಲ್ಲಿ ಚೆಟ್ಟಿಮಾಡ ಪ್ರಜ್ಞಾಬೋಪಯ್ಯ ಪ್ರಥಮ ಸ್ಥಾನವನ್ನು ದ್ವಿತೀಯ ಸ್ಥಾನವನ್ನು ಕಲ್ಲುಮುಟ್ಲು ಪವನ್ ಪಡೆದು ಕೊಂಡರು. ಆರ್ಮ್‍ಡ್ ಪೋಸ್ ಮಕ್ಕಳ ವಿಭಾಗದಲ್ಲಿ ಕೊಂಬನ ಶರಣ್ಯ ಪ್ರಥಮ ಸ್ಥಾನವನ್ನು ಕಾಸ್ಪಾಡಿ ನೇಹಲ್ ಮಾಚಯ್ಯ ಮತ್ತು ಮಳ್ಳಂದಿರ ಸಾನ್ವಿ ಲೋಕೇಶ್ ಜಂಟಿಯಾಗಿ ದ್ವಿತೀಯ ಬಹುಮಾನ ಪಡೆದುಕೊಂಡರು. ಭಾರತೀಯ ಸೈನ್ಯದಲ್ಲಿ ವೀರತನ ಪ್ರದರ್ಶಿಸಿದ ನಿಜಜೀವನ ಘಟನಾವಳಿ ಪ್ರದರ್ಶಿಸಿದ ಕಾಸ್ಪಾಡಿ ಸತೀಶ್ ಪ್ರಥಮ ಸ್ಥಾನ ಪಡೆದು ಆಯ್ಕೆಯಾದರು. ಗೌಡರ ಸಂಸ್ಕøತಿಯ ಪ್ರತೀಕವಾದ ಐನ್‍ಮನೆ ವಿಭಾಗದಲ್ಲಿ ನಾಟೋಳನ ಹಾಗೂ ಕುದುಕುಳಿ ಕುಟುಂಬಸ್ಥರು ಪ್ರಥಮ ಸ್ಥಾನವನ್ನು ಹಾಗೂ ಚೆಟ್ಟಿಮಾಡ ಮತ್ತು ನಂಗಾರು ಕುಟುಂಬಸ್ಥರು ದ್ವಿತೀಯ ಸ್ಥಾನವನ್ನು ಪಡೆದರು.

ಬೆಂಗಳೂರಿನ ಗೌಡ ಸಮಾಜದ ಆವರಣದಲ್ಲಿ ವೇದಿಕೆಯ ಅಧ್ಯಕ್ಷ ಕೊಂಬನ ಪ್ರವೀಣ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವರ್ಚುವಲ್ ಹುತ್ತರಿ ಸ್ಪರ್ಧೆಯ ತೀರ್ಪುಗಾರರಾದ ಅಮ್ಮಾಜಿರ ಪೊನ್ನಪ್ಪ , ದೇವಜನ ರೂಪದೇವಿಪ್ರಸಾದ್, ಕುಂಡ್ಯನ ಮೃಣಾಲಿನಿ ಹಾಗೂ ಧೃತಿ ಪೊನ್ನಪ್ಪ, ದಾನಿಗಳಾದ ಬಿಳಿಮಲೆ ಹರೀಶ್, ಕುದುಪಜೆ ರಾಜೇಶ್, ಕುದುಕುಳಿ ರಾಜೇಶ್, ಬೊಮ್ಮೇಗೌಡನ ಪುರುಷೋತ್ತಮ, ಬೈಮನ ನಯನ್, ಚೆಟ್ಟಿಮಾಡ ನಯನ, ಪೆರುಬಾಯಿ ಮುರುಳೀಧರ, ತೆಕ್ಕಡೆ ಜಾನ್ಹವಿ, ಎಡಿಕೇರಿ ಪ್ರಸನ್ನ ಇನ್ನಿತರರು ಪಾಲ್ಗೊಂಡಿದ್ದರು.

ವೇದಿಕೆಯ ಅಧ್ಯಕ್ಷ ಕೊಂಬನ ಪ್ರವೀಣ್ ಮಾತನಾಡಿ, ಸ್ಪರ್ಧೆ ನಡೆಸಲು ಸಹಕರಿಸಿದ ಸರ್ವರಿಗೂ ಅಭಿನಂದಿಸಿ ಮುಂದೆಯೂ ಇದೇ ರೀತಿಯ ಸಹಕಾರ ನೀಡಬೇಕೆಂದು ಹೇಳಿದರು. ವೇದಿಕೆಯ ಕಾರ್ಯದರ್ಶಿ ಕೂಡಕಂಡ ತರುಣ್ ವಂದಿಸಿದರು. ವಿಜೇತರಿಗೆ ಬಹುಮಾನಗಳನ್ನು ಯುವ ವೇದಿಕೆ ವತಿಯಿಂದ ತಲಪಿಸಲಾಗು ವದು. ಹೆಚ್ಚಿನ ಮಾಹಿತಿಗೆ ಮೊ. 8105072097 ಅನ್ನು ಸಂಪರ್ಕಿಸ ಬಹುದೆಂದು ಕಾರ್ಯದರ್ಶಿ ಕೂಡಕಂಡಿ ತರುಣ್ ತಿಳಿಸಿದ್ದಾರೆ. ಉಪಾಧ್ಯಕ್ಷರಾದ ತಳೂರು ಮಮತ ಹಾಗೂ ಕೇನೇರ ದಿನೇಶ್ ಅತಿಥಿಗಳನ್ನು ಸತ್ಕರಿಸಿದರು.

- ದುಗ್ಗಳ