ಕುಶಾಲನಗರ, ಡಿ. 11: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘವು 2019-20 ನೇ ಸಾಲಿನಲ್ಲಿ ರೂ. 6.61 ಕೋಟಿ ವಹಿವಾಟು ನಡೆಸಿ ರೂ. 2.69 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಂಘವು 2016 ರಲ್ಲಿ ಸ್ಥಾಪನೆಯಾಗಿ 2019-20ನೇ ಸಾಲಿನಲ್ಲಿ ಸಂಘದಲ್ಲಿ ಒಟ್ಟು 863 ಎ ತರಗತಿ ಸದಸ್ಯರು ಹಾಗೂ 163 ಸಿ ಸದಸ್ಯರಿದ್ದಾರೆ. ಸಂಘದಲ್ಲಿ ಒಟ್ಟು ರೂ. 25 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ನಿರಖು ಠೇವಣಿ ರೂ. 33 ಲಕ್ಷ ಸಂಗ್ರಹವಾಗಿದೆ. ಸಂಘದ ಸದಸ್ಯರ ಅನುಕೂಲವಾಗುವ ರೀತಿಯಲ್ಲಿ ಜಾಮೀನು ಸಾಲ, ಪಿಗ್ಮಿ ಸಾಮಾನ್ಯ ಸಾಲ, ಆಭರಣ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.

ತಾ. 13 ರಂದು ಬೆಳಿಗ್ಗೆ 11 ಗಂಟೆಗೆ ವಾರ್ಷಿಕ ಮಹಾಸಭೆಯನ್ನು ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಎನ್. ರಾಮಚಂದ್ರ, ನಿರ್ದೇಶಕ ರಾದ ಬಿ.ಎ. ನಾಗೇಗೌಡ, ಎಂ.ಡಿ. ರಮೇಶ್, ಕಾರ್ಯ ನಿರ್ವಹಣಾಧಿಕಾರಿ ವಿ. ತುಳಸಿ ಉಪಸ್ಥಿತರಿದ್ದರು.