ಮಡಿಕೇರಿ, ಡಿ. 11: ಗ್ರಾಮ ಪಂಚಾಯಿತಿಯ ಚುನಾವಣೆ ಸಂಬಂಧ ಕೊಡಗು ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ಎ. ದೇವರಾಜು ಅವರು ನೇಮಕಗೊಂಡಿದ್ದು, ಮತ ಎಣಿಕೆ ಕೇಂದ್ರ ವೀಕ್ಷಣೆ ಮಾಡಿದರು. ಕುಶಾಲನಗರದಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಹಾಗೆಯೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ಕೂಡಿಗೆ, ಕೂಡುಮಗಳೂರು, ಗುಡ್ದೆಹೊಸೂರು, ಮುಳ್ಳುಸೋಗೆ, 7ನೇ ಹೊಸಕೋಟೆ, ಸುಂಟಿಕೊಪ್ಪ ಮತ್ತಿತರ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ನಾಮಪತ್ರ ಸಲ್ಲಿಸುವುದನ್ನು ಖುದ್ದಾಗಿ ವೀಕ್ಷಿಸಿದರು. ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸಮಸ್ಯೆಗಳು ಇದ್ದಲ್ಲಿ, ಮೊಬೈಲ್ ಸಂಖ್ಯೆ 7483704292 ಮಾಹಿತಿ ನೀಡಬಹುದಾಗಿದೆ ಎಂದು ಚುನಾವಣಾ ವೀಕ್ಷಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜು, ಸಂಪರ್ಕ ಅಧಿಕಾರಿ ಸಿ.ಎಂ. ಪ್ರಮೋದ್ ಇತರರು ಇದ್ದರು.