ಕುಶಾಲನಗರ, ಡಿ. 11: ಮದುವೆ ಮನೆಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬೈಲಕೊಪ್ಪದಲ್ಲಿ ನಡೆದಿದೆ. ಕೊಪ್ಪ ಗ್ರಾಮದ ನಿವಾಸಿ ರಮೇಶ್ (64) ಎಂಬವರು ಮೃತಪಟ್ಟ ವ್ಯಕ್ತಿ.

ಬೈಲಕೊಪ್ಪದಲ್ಲಿ ನಡೆದ ತನ್ನ ಕುಟುಂಬದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ರಮೇಶ್ ಅಸ್ವಸ್ಥರಾದ ಸಂದರ್ಭದಲ್ಲಿ ಮೈಸೂರಿಗೆ ಚಿಕಿತ್ಸೆಗೆ ಸಾಗಿಸಿದರೂ ಫಲಕಾರಿ ಆಗದೆ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.