ಮಡಿಕೇರಿ, ಡಿ. 10: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ನಾಲ್ಕನೇ ದಿನ ಒಟ್ಟು 845 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಡಿಕೇರಿ ತಾಲೂಕಿನಲ್ಲಿ ಇಂದು 321 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಾಳಿಬೀಡಿನಲ್ಲಿ 12, ಮಕ್ಕಂದೂರಿನಲ್ಲಿ 8, ಕೆ. ನಿಡುಗಣೆಯಲ್ಲಿ 12, ಕಡಗದಾಳುವಿನಲ್ಲಿ 24, ಮರಗೋಡಿನಲ್ಲಿ 14, ಹೊಸ್ಕೇರಿಯಲ್ಲಿ 15, ಕಾಂತೂರು ಮೂರ್ನಾಡಿನಲ್ಲಿ 33, ಹೊದ್ದೂರಿನಲ್ಲಿ 9, ಹಾಕತ್ತೂರಿನಲ್ಲಿ 15, ಮೇಕೇರಿಯಲ್ಲಿ 5, ಬೆಟ್ಟಗೇರಿಯಲ್ಲಿ 18, ಮದೆಯಲ್ಲಿ 20, ಸಂಪಾಜೆಯಲ್ಲಿ 11, ಚೆಂಬುವಿನಲ್ಲಿ 6, ಪೆರಾಜೆಯಲ್ಲಿ 10, ಕರಿಕೆಯಲ್ಲಿ 12, ಭಾಗಮಂಡಲದಲ್ಲಿ 4, ಅಯ್ಯಂಗೇರಿಯಲ್ಲಿ 7, ಕುಂದಚೇರಿಯಲ್ಲಿ 10, ಬೇಂಗೂರಿನಲ್ಲಿ 12, ಬಲ್ಲಮಾವಟಿಯಲ್ಲಿ 4, ಎಮ್ಮೆಮಾಡಿನಲ್ಲಿ 5, ನಾಪೋಕ್ಲಿನಲ್ಲಿ 13, ಕುಂಜಿಲದಲ್ಲಿ 14, ಕೊಣಂಜಗೇರಿಯಲ್ಲಿ 9, ನರಿಯಂದಡದಲ್ಲಿ 19 ಸೇರಿ ಒಟ್ಟು 321 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸೋಮವಾರಪೇಟೆ ತಾಲೂಕು

ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಒಂದೇ ದಿನ ಬಾಕಿ ಇರುವ ಹಿನ್ನೆಲೆ ಅಭ್ಯರ್ಥಿಗಳು ಬಿರುಸಿನಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಂಜೆ 7 ಗಂಟೆಯವರೆಗೂ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿದೆ. 3 ಗಂಟೆಯ ಒಳಗೆ ಕಚೇರಿಗೆ ಬಂದವರಿಗೆ ಟೋಕನ್ ನೀಡಿ ಸಂಜೆ 7 ಗಂಟೆಯವರೆಗೂ ನಾಮಪತ್ರ ಸ್ವೀಕರಿಸಲಾಗಿದೆ. ಇಂದು ತಾಲೂಕಿನಾದ್ಯಂತ 524 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕೊಡ್ಲಿಪೇಟೆಯಲ್ಲಿ 16, ಬ್ಯಾಡಗೊಟ್ಟದಲ್ಲಿ 10, ಬೆಸೂರಿನಲ್ಲಿ 19, ಹಂಡ್ಲಿಯಲ್ಲಿ 12, ಶನಿವಾರಸಂತೆಯಲ್ಲಿ 5, ದುಂಡಳ್ಳಿ 3, ನಿಡ್ತದಲ್ಲಿ 32, ಆಲೂರು ಸಿದ್ದಾಪುರದಲ್ಲಿ 19, ಗೌಡಳ್ಳಿಯಲ್ಲಿ 2, ದೊಡ್ಡಮಳ್ತೆ 1, ತೋಳೂರುಶೆಟ್ಟಳ್ಳಿಯಲ್ಲಿ 9, ಬೆಟ್ಟದಳ್ಳಿಯಲ್ಲಿ 10, ಹಾನಗಲ್ಲು 13, ಚೌಡ್ಲು 14, ಬೇಳೂರು 6, ಕಿರಗಂದೂರು 13, ಐಗೂರು 11, ನೇರುಗಳಲೆ 4, ಗಣಗೂರು ಗ್ರಾ.ಪಂ.ನಲ್ಲಿ 10 ನಾಮಪತ್ರ ಸಲ್ಲಿಕೆಯಾಗಿದೆ.

ನೆಲ್ಲಿಹುದಿಕೇರಿಯಲ್ಲಿ 19, ವಾಲ್ನೂರು ತ್ಯಾಗತ್ತೂರು 10, ನಂಜರಾಯಪಟ್ಟಣ 6, ಗುಡ್ಡೆಹೊಸೂರು 29, ಕೂಡಿಗೆ 20, ಕೂಡುಮಂಗಳೂರು 30, ಮುಳ್ಳುಸೋಗೆ 34, ಹೆಬ್ಬಾಲೆ 16, ತೊರೆನೂರು 12, ಶಿರಂಗಾಲ 10, ಚೆಟ್ಟಳ್ಳಿ 13, ಕೆದಕಲ್ 9, ಕೊಡಗರಹಳ್ಳಿ 13, ಕಂಬಿಬಾಣೆ 7, 7ನೇ ಹೊಸಕೋಟೆ 25, ನಾಕೂರು ಶಿರಂಗಾಲ 13, ಸುಂಟಿಕೊಪ್ಪ 27, ಹರದೂರು 7, ಮಾದಾಪುರ 10, ಗರ್ವಾಲೆ ಗ್ರಾ.ಪಂ.ನಲ್ಲಿ 5 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ತಾ. 7 ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ತಾ. 7 ರಂದು 17, ತಾ. 8ರಂದು 72, ತಾ.9 ರಂದು 278, ತಾ. 10ರಂದು 524 ಮಂದಿ ಉಮೇದುವಾರಿಕೆ ಸಲ್ಲಿಸಿದ್ದು, ಒಟ್ಟಾರೆಯಾಗಿ ಈವರೆಗೆ ತಾಲೂಕಿನಲ್ಲಿ 891 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.