ಮಡಿಕೇರಿ, ಡಿ. 10: ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ಕೊಡಗು ಜಿಲ್ಲೆಯ ಕವಿ ಮನಸ್ಸುಗಳಿಗಾಗಿ ವಾಟ್ಸ್ ಆ್ಯಪ್ ಮೂಲಕ ಬಳಗದಿಂದ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಚಳಿಗಾಲದ ಅನುಭವದ ಬಗ್ಗೆ ಕವನ ರಚಿಸಬೇಕಾಗಿದ್ದು ಕವನಗಳು ಹದಿನಾರರಿಂದ ಇಪ್ಪತ್ತನಾಲ್ಕು ಸಾಲುಗಳ ಮಿತಿಯಲ್ಲಿ ಇರಬೇಕು. ಕವನವು ಕನ್ನಡ ಭಾಷೆಯಲ್ಲಿರಬೇಕು. ಕವನವು ರಾಜಕೀಯ ಹಾಗೂ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗಬಾರದು. ಕವನಗಳು ಈಗಾಗಲೇ ಪ್ರಕಟವಾಗಿರಬಾರದು, ಸ್ವಂತ ರಚನೆಯಾಗಿರಬೇಕು. ಕವನಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ತಾ. 19 ರಂದು ಸಂಜೆ ಆರರಿಂದ ಹತ್ತು ಗಂಟೆಯೊಳಗೆ ಕಳುಹಿಸಬೇಕು.

ಕವನಗಳನ್ನು ಮೊಬೈಲ್‍ನಲ್ಲಿ ಟೈಪ್ ಮಾಡಿ ವಾಟ್ಸ್‍ಆ್ಯಪ್‍ನಲ್ಲಿ ಕಳುಹಿಸಬೇಕು. ಫೋಟೋ, ಕೈಬರಹಗಳನ್ನು ಸ್ವೀಕರಿಸುವುದಿಲ್ಲ. ಕವನಗಳನ್ನು ಎಂ.ಪಿ. ಕೇಶವ ಕಾಮತ್, ಅಧ್ಯಕ್ಷ, ಕೊಡಗು ಲೇಖಕರ ಹಾಗೂ ಕಲಾವಿದರ ಬಳಗ, ಇವರ ಮೊಬೈಲ್ ಸಂಖ್ಯೆ 9448346276ಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಬೇಕು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕವನಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾಪತ್ರವನ್ನು ನೀಡಲಾಗುವುದು. ಮೆಚ್ಚುಗೆಯ ಹತ್ತು ಕವನಗಳಿಗೂ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡ ಕವನಗಳಲ್ಲಿ ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸ ಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ತಿಳಿಸಿದ್ದಾರೆ.