ಗೋಣಿಕೊಪ್ಪಲು, ಡಿ.9: ದ.ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ದಿನಕ್ಕೊಂದರಂತೆ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ. ಮಂಗಳವಾರ ತಡರಾತ್ರಿ ಪೊನ್ನಂಪೇಟೆ ಸಮೀಪದ ಬೆಕ್ಕೆಸೊಡ್ಲೂರು ಗ್ರಾಮದ ಸುಳ್ಳಿಮಾಡ ಬಜನ್ ದೇವಯ್ಯನವರಿಗೆ ಸೇರಿದ್ದ ಹಸುವನ್ನು ಹುಲಿ ಕೊಂದು ಹಾಕಿದ್ದು ಮಾಂಸವನ್ನು ತಿಂದು ತೆರಳಿದೆ.

ನಿನ್ನೆ ರಾತ್ರಿ ಬಜನ್ ದೇವಯ್ಯ ಅವರ ಹಸು ವ್ಯಾಘ್ರನ ದಾಳಿಗೆ ಬಲಿಯಾಗಿದೆ.ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆಳಿಗ್ಗೆ 10.30. ಕ್ಕೆ ಕರೆಮಾಡಿ ತಿಳಿಸಿದ್ದರೂ ಕೂಡ ಸಂಜೆ ಸಂಜೆ 4.30 ಆದರೂ ಅಧಿಕಾರಿಗಳು ಬಾರದ ಕಾರಣ ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಹಸುವಿನ ಕಳೇಬರವನ್ನು ಹೂಳಲು ಗುಂಡಿ ತೆಗೆಯುತಿದ್ದ ಸಂದರ್ಭ, ತಡೆದ ಗ್ರಾಮಸ್ಥರು ಡಿಎಫ್‍ಓ ಬರುವವರೆಗೂ ಹೂಳದಂತೆ ತಡೆದರು.

ಸಂಜೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಡಿ ಎಫ್ ಓ ಚಕ್ರಪಾಣಿ ಯವರನ್ನು ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದು ಕೊಂಡರು. ಸಂಜೆ 6 ಗಂಟೆಯ ವರೆಗೂ ಅರಣ್ಯಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಸ್ಥಳದಲ್ಲೇ 30 ಸಾವಿರ ಪರಿಹಾರ ವಿತರಿಸುವಂತೆ ಪಟ್ಟು ಹಿಡಿದರು. 10 ಸಾವಿರ ಚೆಕ್ ವಿತರಿಸಿದ ಅಧಿಕಾರಿಗಳು, ಉಳಿದ 20 ಸಾವಿರದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾ ಗುವುದು ಎಂದರು.

ಇಂದು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಬೋಪಣ್ಣ ಎಂಬವರಿಗೆ ಬೆಕ್ಕೆಸೊಡ್ಲೂರು ಗ್ರಾಮದ ಮಂದತವ್ವ ದೇವಸ್ಥಾನದ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಅಲ್ಲೇ ಸುತ್ತಾ ಮುತ್ತ ಅಡ್ಡಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಕೂಡಲೇ ಹುಲಿಯನ್ನು ಅರಣ್ಯ ಇಲಾಖೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹುಲಿಯ ಚಲನ ವಲನ ವೀಕ್ಷಿಸಲು ಹಸುವಿನ ಕಳೇಬರದ ಸಮೀಪ ಕ್ಯಾಮರಾ ಅಳವಡಿಸಲಾಗಿದೆ.

ಈ ಸಂದರ್ಭ ರೈತ ಸಂಘದ ಸದಸ್ಯರಾದ ಗುಡಿಯಂಗಡ ಗಿರೀಶ್ ಗಣಪತಿ, ಮಚ್ಚಮಾಡ ಕಿರಣ್, ಮಲ್ಲಮಾಡ ಸುನಿಲ್, ಮಲ್ಲಮಾಡ ನರಚಂದ್ರ, ಮಾಚಂಗಡ ನಿರನ್ ಮೊಣ್ಣಪ್ಪ, ಸುಳ್ಳಿಮಾಡ ದಿಲೀಪ್, ಕೆ.ಸಮಿ,

(ಮೊದಲ ಪುಟದಿಂದ) ಫೆÇೀರಂಗಡ ಸೂರಜ್, ಮಚ್ಚಮಾಡ ರವಿ ಶಂಕರ್, ಮಲ್ಲಮಾಡ ಸಂತೋಷ್ ಪಾಲ್ಗೊಂಡಿದ್ದರು. ಡಿಎಫ್‍ಓ ಚಕ್ರಪಾಣಿ, ಆರ್‍ಎಫ್‍ಓ ರಾಜಪ್ಪ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

-ಜಗದೀಶ್/ ಚನ್ನನಾಯಕ