ಪೆÇನ್ನಂಪೇಟೆ. ಡಿ. 9: ಟಿ. ಶೆಟ್ಟಿಗೇರಿ ಮಾಜಿ ಸೈನಿಕ ಸಂಘದ ಸಭೆ, ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಟ್ಟಡದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್ ಮಾತನಾಡಿ; ಮಾಜಿ ಸೈನಿಕರ ಕುಟುಂಬದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ವೀರಾಜಪೇಟೆಯ ಪಾಲಿ ಕ್ಲಿನಿಕ್ ಎಕ್ಸ್ ಸರ್ವಿಸ್ ಮನ್ ಕಾಂಟ್ರಿಬಿಟರಿ ಹೆಲ್ತ್ ಸ್ಕೀಮ್‍ನ ಮುಖ್ಯಸ್ಥ ನಾಯಡ. ಬಿ. ಚಿಣ್ಣಪ್ಪ ಮಾತನಾಡಿ; ಸೈನಿಕರು ಮತ್ತು ಅವರ ಅವಲಂಬಿತರು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು, ಎಲ್ಲಾ ದಾಖಲಾತಿಗಳಲ್ಲಿ ವಿವರಗಳು ಒಂದೇ ರೀತಿ ಇರುವಂತೆ ನೋಡಿಕೊಳ್ಳಬೇಕು. ಹುಟ್ಟಿದ ದಿನಾಂಕ, ಹೆಸರು, ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿಕೊಂಡು ದಾಖಲಾತಿಯನ್ನು ಸಲ್ಲಿಸಿದ್ದಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ಪಡೆದು ಕೊಳ್ಳಲು ವಿಳಂಬವಾಗುವುದಿಲ್ಲ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮನ್ನೇರಾ ರಮೇಶ್, ಗೌರವ ಕಾರ್ಯದರ್ಶಿ ಐಪುಮಾಡ ನಂಜಪ್ಪ, ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಚಂಗುಲಂಡ ಸತೀಶ್, ಸಹ ಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ ನಿರ್ದೇಶಕರುಗಳಾದ ಮಿದೇರಿರ ಸುರೇಶ್, ಮಂದಮಾಡ ಗಣೇಶ್, ಚೊಟ್ಟೆಯಂಡಮಾಡ ಗೋಕುಲ್, ಕೈಬುಲಿರಾ ಪಾರ್ವತಿ, ಚಟ್ಟಂಗಡ ಪುಣ್ಯವತಿ ಹಾಜರಿದ್ದರು.

ಇದೇ ಸಂದರ್ಭ ವೀರಾಜಪೇಟೆ ಇ.ಸಿ.ಎಚ್.ಎಸ್. ವಿಭಾಗದ ಮುಖ್ಯಸ್ಥ ನಾಯಡ. ಬಿ. ಚಿಣ್ಣಪ್ಪ ಹಾಗೂ ಶ್ರೀಮಂಗಲ ಠಾಣೆಯ ಎಸ್.ಐ. ರವಿಶಂಕರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಅಪ್ಪಚಂಗಡ ಮೋಟಯ್ಯ ವಂದಿಸಿದರು.