ಮಡಿಕೇರಿ, ಡಿ. 9: ಗೋವು ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಟ್ಟಗೇರಿಯ ಅಯ್ಯಪ್ಪ ಎಂಬವರ ಎರಡು ಗೋವುಗಳಲ್ಲಿ ಒಂದನ್ನು ಕಳವು ಮಾಡಿರುವ ಬಗ್ಗೆ ದೊರೆತ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಕಳವು ಮಾಡಿದ ಆರೋಪಿಗಳಾದ ಬೆಟ್ಟಗೇರಿಯ ರುದ್ರಪ್ಪ, ಕೊಂಡಂಗೇರಿಯ ಅಬ್ದುಲ್ ರೆಹಮಾನ್, ಸಿಯಾಬ್, ಇಸ್ಮಾಯಿಲ್ ಹಾಗೂ ಅಬಿದ್ ಜೈನ್ ಎಂಬವರುಗಳÀನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಡಿವೈಎಸ್‍ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಉಪ ನಿರೀಕ್ಷಕ ಸದಾಶಿವ, ಮುಖ್ಯ ಪೇದೆಗಳಾದ ಮಂಜು, ರವಿ ಹಾಗೂ ಸಿಬ್ಬಂದಿಗಳಾದ ಮಾಧಯ್ಯ, ಸಜ್ಜನ, ದಿನೇಶ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.