ಗೋಣಿಕೊಪ್ಪಲು, ಡಿ. 9: ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಯನ್ನು ವಶಕ್ಕೆ ಪಡೆದ ಪೆÇನ್ನಂಪೇಟೆ ಪೆÇಲೀಸರು ಆರೋಪಿ ಕುಟ್ಟ ಗ್ರಾಮದ ತಮಿಳರ ರಾಜ (40) ಎಂಬಾತನನ್ನು ಬಂಧಿಸಿದ್ದಾರೆ.

ಪೆÇನ್ನಂಪೇಟೆ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈತ ಕೇರಳ ರಾಜ್ಯದ ಲಾಟರಿ ಟಿಕೆಟ್‍ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಇದ್ದ 52 ಲಾಟರಿ ಟಿಕೆಟ್‍ಗಳು ಹಾಗೂ 1770 ನಗದು ಹಣವನ್ನು ಅಮಾನತು ಪಡಿಸಿಕೊಂಡ ಪೆÇಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಎಸ್‍ಐ. ಕುಮಾರ್ ಮುಂದಾಳತ್ವ ದಲ್ಲಿ ಎ.ಎಸ್.ಐ ಗಣಪತಿ, ಪ್ರಾನ್ಸೀಸ್, ಸಿಬ್ಬಂದಿಗಳಾದ ಎಂ.ಡಿ. ಮನು, ಎಂ.ಎಸ್. ರಂಜಿತ್, ಪ್ರಮೋದ್ ಹಾಗೂ ವಿಶ್ವನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.