ಶನಿವಾರಸಂತೆ, ಡಿ. 9: ಸಮೀಪದ ಬೆಸೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಸಂಘದ ಆವರಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಮಾತನಾಡಿ, ಸಂಘ ಅಭಿವೃದ್ಧಿಯ ಪಥದಲ್ಲಿ ಸಾಗಲು ಸರ್ವ ಸದಸ್ಯರ ಸಹಕಾರ ಅತಿ ಮುಖ್ಯವಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರ್ಷಿಕ ವರದಿಯೊಂದಿಗೆ ಆಯವ್ಯಯ ಪಟ್ಟಿ ಮಂಡಿಸಿದರು. ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ನವೀನ್ ಕುಮಾರ್, ಪ್ರಭಾರ ಅಧಿಕಾರಿ ರೂಪಾವತಿ, ಸಂಘದ ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ಹಾಲಪ್ಪ, ವಿರೂಪಾಕ್ಷ, ಶಂಕರಪ್ಪ, ಕಾಳಪ್ಪ, ಶಿವಣ್ಣ, ಪುರುಷೋತ್ತಮ್, ಕುಮಾರ್, ಚಂದ್ರಚಾರಿ, ಲೋಲಾಕ್ಷ, ಚಂದ್ರಕಲಾ, ಸದಸ್ಯರು ಹಾಜರಿದ್ದರು.