ಕರಿಕೆ, ಡಿ. 9: ಇಲ್ಲಿನ ಸ.ಹಿ.ಪ್ರಾ. ಶಾಲೆ ಕರಿಕೆ ಕಾಲೋನಿಯಲ್ಲಿ ಗ್ರಾ.ಪಂ.ಗ್ರಂಥಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ‘ಓದು ಬೆಳಕು’ ಆಂದೋಲನದಡಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಯಿತು.
ಕರಿಕೆ ಗ್ರಂಥಾಲಯದ ಗ್ರಂಥ ಪಾಲಕಿ ಕೆ.ಜಿ. ಸಾವಿತ್ರಿ ಅವರು ಶಾಲೆಗೆ ಭೇಟಿ ನೀಡಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಕುಮಾರ್ ಎನ್ .ಎಸ್., ಸಹ ಶಿಕ್ಷಕಿ ಮಹಾಲಕ್ಷ್ಮಿ ಬಿ.ಟಿ., ಆಶ್ರಮ ಶಾಲಾ ಮುಖ್ಯ ಶಿಕ್ಷಕ ಭರಮಪ್ಪ ಪಾಶಗಾರ ಹಾಗೂ ವಿದ್ಯಾರ್ಥಿಗಳು ಇದ್ದರು.