ಶನಿವಾರಸಂತೆ, ಡಿ. 9: ಶನಿವಾರಸಂತೆ ಪೊಲೀಸ್ ಠಾಣೆ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಹಾಗೂ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ, ಆಟೋ ಚಾಲಕರಿಗೆ ಹಾಗೂ ಟ್ಯಾಕ್ಸಿ ಚಾಲಕರಿಗೆ ಅಪರಾಧ ತಡೆ ಮಾಸಾಚರಣೆಯ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಿಬ್ಬಂದಿಗಳಾದ ಹರೀಶ್ ಕುಮಾರ್, ರವಿಚಂದ್ರ, ಶಫೀರ್ ಪಾಲ್ಗೊಂಡಿದ್ದರು.