ಶ್ರೀಮಂಗಲ, ಡಿ. 8: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳ ಮರೆನಾಡ್ ಪುತ್ತರಿ ಕೋಲ್ ಮಂದ್ ಬಿರುನಾಣಿಯ ಮರೆನಾಡ್ ಕೊಡವ ಸಮಾಜದ ನಾಡ್ ಮಂದ್‍ನಲ್ಲಿ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ನಡೆಯಿತು.

ನಾಡ್‍ತಕ್ಕ ಕಾಯಪಂಡ, ಚಂಗಣಮಾಡ, ಬೊಳ್ಳೆರ ಕುಟುಂಬದ ತಕ್ಕರನ್ನು ಮಂದ್‍ಗೆ ಸಾಂಪ್ರದಾಯಿಕವಾಗಿ ತಳಿಯತಕ್ಕಿ ಬೊಳಕ್, ಒಡ್ಡೋಲಗದೊಂದಿಗೆ ಮಂದ್‍ಗೆ ಕರೆತರಲಾಯಿತು. ನಂತರ ತಕ್ಕ ಕುಟುಂಬದಿಂದ ಪದ್ಧತಿಯಂತೆ ಮಂದ್ ಪುಡಿಪೆÇೀ ಕಾರ್ಯಕ್ರಮ ನಂತರ ಪುತ್ತರಿ ಕೋಲಾಟ್ ನಡೆಯಿತು. ಪುತ್ತರಿ ಕೋಲಾಟ್‍ನಲ್ಲಿ ಬಿರುನಾಣಿ, ಬಾಡಗರಕೇರಿ, ಪೆÇರಾಡ್, ತೆರಾಲು, ಪರಕಟಕೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂದ್‍ನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸಹ ಪಾಲ್ಗೊಂಡು ಗಮನಸೆಳೆದರು.

ಮರೆನಾಡ್ ಕೊಡವ ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರು ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷರುಗಳಾದ ಅಣ್ಣಳಮಾಡ ಲಾಲಾ ಅಪ್ಪಣ್ಣ, ಬೊಳ್ಳೆರ ಪೆÇನ್ನಪ್ಪ, ಕರ್ತಮಾಡ ಮಿಲನ್ ಮೇದಪ್ಪ, ಗೌರವ ಕಾರ್ಯದರ್ಶಿ ಮಲ್ಲೇಂಗಡ ಧನಂಜಯ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತಾ, ಖಜಾಂಚಿ ಕಾಯಪಂಡ ಸುನೀಲ್ ಮತ್ತು ನಿರ್ದೇಶಕರು ಹಾಜರಿದ್ದರು.