ವೀರಾಜಪೇಟೆ, ಡಿ. 8: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈಗಾಗಲೇ ರೂ. 40.60 ಲಕ್ಷ ನಿವ್ವಳ ಲಾಭವನ್ನು ಹೊಂದಿದ್ದು. ಸಂಘದ ಸದಸ್ಯರುಗಳಿಗೆ ಶೇ. 20 ರಷ್ಟು ಡಿವಿಡೆಂಡ್ ಘೋಷಣೆ ಮಾಡಿದೆಯೆಂದು ಸಂಘದ ಅಧ್ಯಕ್ಷ ಕುಟ್ಟಂಡ ವಿನು ಪೂವಯ್ಯ ತಿಳಿಸಿದ್ದಾರೆ.

2570 ಸದಸ್ಯರುಗಳನ್ನು ಹೊಂದಿರುವ ಸಂಘವು ಕಳೆದ ಸಾಲಿಗಿಂತ ರೂ. 70.73 ಲಕ್ಷಗಳ ಹೆಚ್ಚಳದೊಂದಿಗೆ ರೂ. 1941 ಲಕ್ಷ ಠೇವಣಾತಿಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.