ಗುಡ್ಡೆಹೊಸೂರು, ಡಿ. 8: ಕೊಡಗು ಜಿಲ್ಲೆಯ 2002ನೇ ಬ್ಯಾಚ್‍ನ ಪೊಲೀಸ್ ಸಿಬ್ಬಂದಿಗಳು ವೃತ್ತಿಯಲ್ಲಿ 18 ವರ್ಷ ಪೂರೈಸಿದ ಹಿನ್ನೆಲೆ ‘ಸ್ನೇಹಕೂಟ’ ಸಮಾರಂಭವು ಇತ್ತೀಚೆಗೆ ಹೊಸಕೋಟೆಯ ಖಾಸಗಿ ವಸತಿ ಗೃಹದಲ್ಲಿ ನಡೆಯಿತು. ಈ ಸಂದರ್ಭ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿ ಟಿ.ಎಸ್. ಶಾಜಿ ಅವರನ್ನು ಗೌರವಿಸಲಾಯಿತು. ಅಲ್ಲದೆ ಇತ್ತೀಚೆಗೆ ದೈವಾಧೀನರಾದ ಸಿಬ್ಬಂದಿಗಳಾದ ಹೆಚ್.ಪಿ. ಪ್ರಕಾಶ್ ಮತ್ತು ಪ್ರಧಿ ಅವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.