ಮಡಿಕೇರಿ, ಡಿ. 8: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆ ಹಿನ್ನೆಲೆ ಎರಡನೇ ದಿನವಾದ ಇಂದು ಒಟ್ಟು 78 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಡಿಕೇರಿ ತಾಲೂಕಿನಲ್ಲಿ ಇಂದು 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ತಾ. 7ರ 5 ನಾಮಪತ್ರ ಸೇರಿ ಒಟ್ಟು 11 ನಾಮಪತ್ರಗಳು ಸಲ್ಲಿಕೆ ಯಾದಂತಾಗಿದೆ. 26 ಗ್ರಾಮ ಪಂಚಾಯಿತಿಗಳು ಸೇರಿ ಮಕ್ಕಂದೂರಿನಲ್ಲಿ 2, ಮರಗೋಡಿನಲ್ಲಿ 1, ಚೆಂಬು ಗ್ರಾಮದಲ್ಲಿ 1, ಅಯ್ಯಂಗೇರಿಯಲ್ಲಿ 2, ನಾಪೋಕ್ಲು 3, ನರಿಯಂದಡದಲ್ಲಿ 2 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸೋಮವಾರಪೇಟೆಯ 72

ತಾಲೂಕಿನ 40 ಗ್ರಾಮ ಪಂಚಾಯಿತಿಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಇಂದು 72 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಕೆಗೆ ನಿನ್ನೆಯಿಂದ ಅವಕಾಶ ಕಲ್ಪಿಸಿದ್ದು, ತಾ. 7 ರಂದು 17 ನಾಮಪತ್ರಗಳು ಸಲ್ಲಿಸಲ್ಪಟ್ಟಿದ್ದವು. ಇಂದು 72 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಒಟ್ಟು 89 ನಾಮಪತ್ರ ಸಲ್ಲಿಕೆಯಾದಂತಾಗಿದೆ.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ 9, ಬೆಸ್ಸೂರು 2, ಶನಿವಾರಸಂತೆ 5, ಹಂಡ್ಲಿ, ದುಂಡಳ್ಳಿ, ನಿಡ್ತ, ದೊಡ್ಡಮಳ್ತೆ, ಹಾನಗಲ್ಲು, ನಂಜರಾಯಪಟ್ಟಣ, ತೊರೆನೂರು, ಸುಂಟಿಕೊಪ್ಪ ಗ್ರಾ.ಪಂ.ಗಳಲ್ಲಿ ತಲಾ ಒಂದು, ಕೂಡಿಗೆ 7, ಕೂಡುಮಂಗಳೂರು 17, ಮುಳ್ಳುಸೋಗೆ 13, ಹೆಬ್ಬಾಲೆ 7, ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ಇಂದು 4 ನಾಮಪತ್ರ ಸಲ್ಲಿಕೆಯಾಗಿದ್ದು, ಈವರೆಗೆ ಉಮೇದುವಾರಿಕೆ ಸಲ್ಲಿಸಿದವರ ಸಂಖ್ಯೆ 89ಕ್ಕೆ ಏರಿದೆ.