ಮಡಿಕೇರಿ, ಡಿ. 7: ಶನಿವಾರಸಂತೆ ನಾಡಕಚೇರಿ ಆವರಣದಲ್ಲಿ ಉಪತಹಶೀಲ್ದಾರ್ ಮಧುಸೂದನ್ ಅವರು ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಕಾಲ ಕಾರ್ಯಕ್ರಮದಲ್ಲಿ ಸುಮಾರು 98 ಇಲಾಖೆಗಳು ಹಾಗೂ 1025 ಸೇವೆಗಳು ಲಭ್ಯವಿದ್ದು, ಆಡಳಿತದಲ್ಲಿ ಸುಧಾರಣೆಯನ್ನು ತಂದು ನಾಗರಿಕರಿಗೆ ತುರ್ತು ಸೇವೆಯನ್ನು ಸಲ್ಲಿಸುವ ದೃಷ್ಟಿಯಿಂದ ಇದನ್ನು ಜಾರಿಗೊಳಿಸಲಾಗಿದೆ. ಇದರ ಸದುಪಯೋಗವನ್ನು ನಾಗರಿಕರು ಉಪಯೋಗಿಸಿಕೊಳ್ಳಬೇಕಾಗಿ ತಿಳಿಸಿದರು.
ಈ ಸಂದರ್ಭ ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಎ. ಆದಿಲ್ಪಾಶ, ಅಬ್ದುಲ್ ರಜಾಕ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಕೆ.ಎಸ್. ಹೂವಯ್ಯ, ರುದ್ರಯ್ಯ ಹಾಗೂ ಇಲಾಖಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.