ಗೋಣಿಕೊಪ್ಪ ವರದಿ, ಡಿ. 7: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸಹಯೋಗದಲ್ಲಿ ನಡೆಯುತ್ತಿರುವ ರಿಂಕ್ ಹಾಕಿಯಲ್ಲಿ 18 ವಯೋಮಿತಿಯ ಬಾಲಕರು ಸೆಮಿ ಫೈನಲ್‍ಗೆ ಪ್ರವೇಶ ಪಡೆದಿವೆ. ಮಹಿಳೆಯರ ವಿಭಾಗದಲ್ಲಿ 2 ಡ್ರಾ, 4 ಗೆಲುವು ಫಲಿತಾಂಶ ನೀಡಿವೆ.ಮಹಿಳೆಯರ ಲೀಗ್

ಮಹಿಳೆಯರ ಲೀಗ್‍ನಲ್ಲಿ ಟೀಂ ಕಡಮಕೊಲ್ಲಿ ಹಾಗೂ ಪವಿನ್ ಪೊನ್ನಣ್ಣ ತಂಡವು 2-2 ಗೋಲುಗಳ ಡ್ರಾ ಸಾಧನೆ ಮಾಡಿತು. ಕಡಮಕೊಲ್ಲಿಯ ಲಿಕಿತಾ, ಆದೀರಾ, ಪವಿನ್ ತಂಡದ ಅಂಜಲಿ, ಪೂಜಿತಾ ಗೋಲು ಹೊಡೆದರು.ನಾಪೋಕ್ಲು ಶಿವಾಜಿ ತಂಡವು ವೈಪರ್ಸ್ ವಿರುದ್ಧ 4-1 ಗೋಲುಗಳ ಗೆಲುವು ಪಡೆಯಿತು. ಶಿವಾಜಿ ತಂಡದ ಚಂದನಾ, ನಿಹಾ 2, ವೈಪರ್ಸ್‍ನ ನಿಶಾ ಗೋಲು ಬಾರಿಸಿದರು.ಕೃತಿಕಾ ಬಾರಿಸಿದ ಏಕೈಕ ಗೋಲಿನಿಂದ ಟೀಂ ಕಡಮಕೊಲ್ಲಿ ತಂಡವು ಬಂಬ್ಲ್‍ಬೀ ವಿರುದ್ಧ 1-0 ಗೋಲಿನಿಂದ ಗೆಲುವು ಪಡೆಯಿತು.ಪವಿನ್ ಪೊನ್ನಣ್ಣ ತಂಡವು ಸೌತ್ ಕೂರ್ಗ್ ತಂಡದ ವಿರುದ್ಧ 2-0 ಗೋಲುಗಳಿಂದ ಜಯಿಸಿತು. ಪವಿನ್ ತಂಡದ ಜೀವಿತಾ, ಅಂಜಲಿ ಗೋಲು ಹೊಡೆದರು. ಸೌತ್‍ಕೂರ್ಗ್ ಹಾಗೂ ನಾಪೋಕ್ಲು ಶಿವಾಜಿ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾ ಸಾಧನೆ ಮಾಡಿತು. ಸೌತ್‍ಕೂರ್ಗ್ ತಂಡದ ಚಂದನಾ 2, ಶಿವಾಜಿಯ ಪವಿತ್ರ, ಲೀಲಾವತಿ ಗೋಲು ಬಾರಿಸಿದರು.

ಬಂಬ್ಲ್ ಬೀ ತಂಡವು ವೈಪರ್ಸ್ ವಿರುದ್ಧ 4-3

(ಮೊದಲ ಪುಟದಿಂದ) ಗೋಲುಗಳ ರೋಚಕ ಗೆಲುವು ಪಡೆಯಿತು. ಬಂಬ್ಲ್ ಬೀ ತಂಡದ ದೇಚಮ್ಮ, ಪೂಜಾ 2, ವೈಪರ್ಸ್‍ನ ನಿಶಾ, ವಿದ್ಯಾ, ಅಪ್ಸರಾ ಗೋಲು ಹೊಡೆದರು.

ಬಾಲಕರ ವಿಭಾಗ

18 ವಯೋಮಿತಿಯ ಬಾಲಕರಲ್ಲಿ ಅತ್ತೂರು, ಕೋವಿಯಲ್ಪಟ್ಟಿ, ಫಾಲ್ಕನ್ಸ್ ಹಾಕಿ ಹಾಗೂ ಎಸ್‍ಆರ್‍ಸಿ ತಂಡಗಳು ಸೆಮಿ ಫೈನಲ್‍ಗೆ ಪ್ರವೇಶ ಪಡೆದವು.

ಕ್ವಾರ್ಟರ್ ಫೈನಲ್‍ನಲ್ಲಿ ಅತ್ತೂರು ತಂಡವು ಹೈಲ್ಯಾಂಡರ್ಸ್ ವಿರುದ್ಧ 4-3 ಗೋಲುಗಳ ಗೆಲುವು ಪಡೆಯಿತು. ಅತ್ತೂರು ತಂಡದ ಸಪನ್, ದೃವಿನ್, ಬಿಪಿನ್, ಧನುಷ್, ಹೈಲ್ಯಾಂಡರ್ಸ್ ತಂಡದ ತಶ್ವಿನ್, ಲಿವಿನ್ ಗೋಲು ಹೊಡೆದರು.

ಕೋವಿಯಲ್ಪಟ್ಟಿ ತಂಡವು ಕುಂದ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಕೋವಿಯಲ್ಪಟ್ಟಿ ತಂಡದ ಸತೀಶ್, ಮುತ್ತುಕುಮಾರ್ ತಲಾ 2 ಗೋಲು, ಕುಂದ ತಂಡದ ಅಖಿಲ್ ಅಯ್ಯಪ್ಪ ಗೋಲು ಬಾರಿಸಿದರು.

ಫಾಲ್ಕನ್ಸ್ ಹಾಕಿ ತಂಡವು ಹರಿಹರ ವಿರುದ್ಧ 7-0 ಗೋಲುಗಳ ಭರ್ಜರಿ ಗೆಲುವು ಪಡೆಯಿತು. ಉಜ್ವಲ್ 3, ರಾಜ್‍ಕುಮಾರ್ 2, ರೋಶನ್, ದೀಪಕ್ ತಲಾ ಒಂದೊಂದು ಗೋಲು ಹೊಡೆದರು.

ಎಸ್‍ಆರ್‍ಸಿ ತಂಡವು ದಾಲ್ಪೀನ್ಸ್ ವಿರುದ್ಧ 4-3 ಗೋಲುಗಳ ಗೆಲುವು ಪಡೆಯಿತು. ಎಸ್‍ಆರ್‍ಸಿ ತಂಡದ ಗೌತಮ್ 3, ಅರ್ಜುನ್, ಡಾಲ್ಪೀನ್ಸ್‍ನ ಹೂಮೈಜ್, ವಿಕೇಶ್, ವಿಶ್ವಾಸ್ ತಲಾ ಒಂದೊಂದು ಗೋಲು ಹೊಡೆದು ಮುಂಚಿದರು.

ಬಾಲಕರ ಲೀಗ್‍ನಲ್ಲಿ ಹೈಲ್ಯಾಂಡರ್ಸ್ ತಂಡಕ್ಕೆ ಸಿವಿಕೆ ಅಕಾಡೆಮಿ ವಿರುದ್ಧ 10-1 ಗೋಲುಗಳ ಜಯ ದೊರೆಯಿತು. ಹೈಲ್ಯಾಂಡರ್ಸ್ ತಂಡದ ಶ್ರವಣ್ 4, ಚಿಣ್ಣಪ್ಪ, ಚೆಂಗಪ್ಪ 2, ಲಿವಿನ್, ತಶ್ವಿನ್, ಅಕಾಡೆಮಿಯ ಕುಶಾಲ್ ರೆಡ್ಡಿ ಗೋಲು ಹೊಡೆದರು. ಅತ್ತೂರು ತಂಡವು ಕೈಟ್ ಫಾಲ್ಸ್ ವಿರುದ್ಧ 12-0 ಗೋಲುಗಳಿಂದ ಜಯಿಸಿತು. ಧನುಶ್ 2, ನಿಶೀತ್ 2, ಬಿಪಿನ್, ದೃವಿನ್, ದಿವನ್, ಗೌರವ್, ವಚನ್, ಸಪನ್ ಗೋಲು ಹೊಡೆದರು.

ಎಸ್‍ಆರ್‍ಸಿ ತಂಡವು ಡೀಫ್ರಾಸ್ಟರ್ಸ್ ತಂಡದ ವಿರುದ್ಧ 11-3 ಗೋಲುಗಳಿಂದ ಗೆಲುವು ಪಡೆಯಿತು. ಎಸ್‍ಅರ್‍ಸಿ ತಂಡದ ಮೌರ್ಯ 4, ಆರ್ಯನ್ 3, ದರ್ಶನ್, ಅರ್ಜುನ್, ವಚನ್, ನಾಚಪ್ಪ, ಡೀಫ್ರಾಸ್ಟರ್ಸ್ ತಂಡದ ಪ್ರಜ್ವಲ್ 2, ಅಯುಷ್ ಗೋಲು ಬಾರಿಸಿದರು.

ಹೈಲ್ಯಾಂಡರ್ಸ್ ತಂಡವು 2-1 ಗೋಲುಗಳಿಂದ ಕೆಎಸ್‍ಆರ್‍ಸಿ ತಂಡವನ್ನು ಮಣಿಸಿತು. ಹೈಲ್ಯಾಂಡರ್ಸ್ ತಂಡದ ಶ್ರವಣ್, ಲಿವಿನ್, ಕೆಎಸ್‍ಆರ್‍ಸಿ ತಂಡದ ಮೋಕ್ಷಿತ್ ಗೋಲು ಹೊಡೆದರು.

ಕುಂದ ತಂಡವು ಯುನೈಟೆಡ್ ಮರ್ಕರಾ ತಂಡದ ಎದುರು 7-3 ಗೋಲುಗಳ ಅಂತರದಿಂದ ಜಯ ಪಡೆಯಿತು. ಕುಂದ ತಂಡದ ಅಖಿಲ್, ದಿಶನ್ 2, ನಂಜುಂಡ, ಭವನ್, ಆಕಾಶ್ ಬಿದ್ದಪ್ಪ, ಮರ್ಕರಾ ತಂಡದ ಗೌರವ್ 2, ಶಶಾಂಕ್ ಗೋಲು ಬಾರಿಸಿದರು.

ಹರಿಹರ ತಂಡಕ್ಕೆ ಟಿಂಬರ್ ಫಾಲ್ಪ್ಸ್ ವಿರುದ್ಧ 5-2 ಗೋಲುಗಳ ಗೆಲುವು ದಕ್ಕಿತು. ಹರಿಹರ ತಂಡದ ಹರ್ಷಿತ್ 4, ಕುಶಾಲ್, ಟಿಂಬರ್ ತಂಡ ಸಮಯ್, ದೇವಯ್ಯ ಗೋಲು ಹೊಡೆದರು. ಮಂಗಳವಾರ ಮಹಿಳೆಯರ ಪ್ಲೇ ಆಫ್, ಸೆಮಿ ಹಾಗೂ 18 ವಯೋಮಿತಿಯ ಬಾಲಕರ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ.