ಮಡಿಕೇರಿ, ಡಿ. 7: ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡುವದಾಗಿ ಜಿಲ್ಲೆಗೆ ನೂತನವಾಗಿ ನೇಮಕಗೊಂಡಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ರೂಪ ಹೇಳಿದರು.ಇದುವರೆಗೂ ಪ್ರಭಾರ ಎಡಿಸಿ ಆಗಿದ್ದ ಪಿ. ಶ್ರೀನಿವಾಸ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ರೂಪ ಅವರು ‘ಶಕ್ತಿ’ಯೊಂದಿಗೆ ಮಾತನಾಡಿದರು. 1998 ಬ್ಯಾಚ್‍ನ ಕೆಎಎಸ್ (ಮೊದಲ ಪುಟದಿಂದ) ಅಧಿಕಾರಿಯಾಗಿರುವ ರೂಪ ಅವರು ಮೂಲತಃ ಮೈಸೂರಿನವರಾಗಿದ್ದು, ಮೈಸೂರು ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಆಗಮಿಸಿರುವ ಅವರು, ಕೊಡಗಿನ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು, ಸಾಮಥ್ರ್ಯ ಮೀರಿ ಜನರಿಗಾಗಿ ಒಳ್ಳೆಯ ಕೆಲಸ ಮಾಡುವ ಇರಾದೆ ಹೊಂದಿರುವದಾಗಿ ಹೇಳಿದರು. ಇಲ್ಲಿನ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು. ಕೊಡಗು ಒಳ್ಳೆಯ ಸ್ಥಳವಾಗಿದ್ದು, ಉತ್ತಮ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವೆಂದು ರೂಪ ನುಡಿದರು.