ಮಡಿಕೇರಿ, ಡಿ. 7: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕು ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕಾರ್ಯ ಇಂದಿನಿಂದ ಆರಂಭಗೊಂಡಿದ್ದು, ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು - ಬೇಡು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಇಂದು ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಬ್ಯಾಡಗೊಟ್ಟ, ಬೆಸೂರು, ದುಂಡಳ್ಳಿ, ಕಿರಗಂದೂರು, ಹೆಬ್ಬಾಲೆ ಗ್ರಾ.ಪಂ.ಗಳಿಗೆ ತಲಾ ಒಂದು, ಹಂಡ್ಲಿ ಗ್ರಾ.ಪಂ.ನಲ್ಲಿ 4, ಶನಿವಾರಸಂತೆಯಲ್ಲಿ 2, ಕೂಡಿಗೆಯಲ್ಲಿ 3, ಶಿರಂಗಾಲದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿವೆ.