ಮಡಿಕೇರಿ, ಡಿ. 7: ಗ್ರಾಮ ಪಂಚಾಯಿತಿ ಚುನಾವಣೆಗಳು ಘೋಷಣೆಯಾದ ಬಳಿಕ ಈ ಹಿಂದಿನ ಚುನಾವಣೆಗಳಲ್ಲಿದ್ದಂತೆಯೇ ಜಿಲ್ಲಾಡಳಿತದಿಂದ ಜಿಲ್ಲೆಯ ಕೋವಿ ಪರವಾನಗಿದಾರರು ತಮ್ಮ ಕೋವಿಗಳನ್ನು ಸನಿಹದ ಪೊಲೀಸ್ ಠಾಣೆಗಳಿಗೆ ತಂದೊಪ್ಪಿಸಿ ಠೇವಣಿಯಿಡುವದು ಕಡ್ಡಾಯ ಎಂದು ಜಿಲ್ಲಾಧಿಕಾರಿಯವರು ಇತ್ತೀಚೆಗೆ ಆದೇಶಿಸಿದ್ದರು. ಈ ಬಗ್ಗೆ ಜಿಲ್ಲೆಯ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವದು ಬಳಿಕದ ವಿದ್ಯಮಾನವಾಗಿದೆ. ಪರವಾನಗಿದಾರರು ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿದ್ದರೆ ಮಾತ್ರ ಅಂತಹವರು ತಮ್ಮ ಕೋವಿಗಳನ್ನು ತಂದೊಪ್ಪಿಸಬೇಕೇ ಹೊರತು ಎಲ್ಲ ಪರವಾನಗಿದಾರರೂ ಠೇವಣಿಯಿಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಡಳಿತದ ಆದೇಶಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.ಅಲ್ಲದೆ, ಸಿಎನ್ ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಪರವಾನಗಿ ವಿನಾಯತಿ ಹೊಂದಿರುವ ಜಮ್ಮಾ ಹಿಡುವಳಿದಾರರು ತಮ್ಮ ಕೋವಿಗಳನ್ನು ಒಪ್ಪಿಸಬೇಕಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಜಿಲ್ಲೆಯಲ್ಲಿ ಈ ಕುರಿತು ಕಂಡುಬಂದಿರುವ ಗೊಂದಲದ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಇಂದು ‘ಶಕ್ತಿ’ ಸಂಪರ್ಕಿಸಿ ಮಾಹಿತಿ ಬಯಸಿದುದಕ್ಕೆ ಅವರು ಸ್ಪಂದಿಸಿದ್ದಾರೆ. ಬಳಿಕ ಅವರು ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು ಅದರ ಅನ್ವಯ ವಿವರಣೆ ಈ ಕೆಳಗಿನಂತಿದೆ.

‘ಬಂದೂಕು ವಿನಾಯಿತಿ ಪತ್ರ (ಇxemಠಿಣioಟಿ ಅeಡಿಣiಜಿiಛಿಚಿಣe) ಹೊಂದಿರುವವರು ಬಂದೂಕುಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿಯಿರಿಸುವ ಅಗತ್ಯವಿಲ್ಲ’. ಎಂದು ಡಿಸಿ ತಿಳಿಸಿದ್ದಾರೆ. ‘ಶಕ್ತಿ’ಗೆ ದೊರೆತ ಮಾಹಿತಿಯಂತೆ ಪರವಾನಗಿ ವಿನಾಯತಿ ಹೊಂದಿರುವ ಎಲ್ಲ ಜಮ್ಮಾ ಹಿಡುವಳಿದಾರರಿಗೂ ಇದು ಅನ್ವಯಿಸುತ್ತದೆ. ಅಂತಹವರು ತಮ್ಮ ಕೋವಿಗಳನ್ನು ಠಾಣೆಗಳಿಗೆ ಒಪ್ಪಿಸುವ ಅಗತ್ಯವಿಲ್ಲ. ಆದರೆ ಡಿಸಿಯವರ ಪ್ರಕಾರ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ವ್ಯಕ್ತಿಗಳು ಬಂದೂಕು ವಿನಾಯಿತಿ ಪತ್ರ ಹೊಂದಿದ್ದರೂ ಕೂಡ ಅಂತಹವರು ಕಡ್ಡಾಯವಾಗಿ ಬಂದೂಕನ್ನು ಠೇವಣಿ ಇರಿಸಬೇಕಾಗಿದೆ.

ಅಲ್ಲದೆ, ಜಿಲ್ಲೆಯಲ್ಲಿ 4,500 ಮಂದಿ ಕೋವಿ ಪರವಾನಗಿ ಹೊಂದಿರುವವರಿದ್ದಾರೆ. ಇವರೆÉಲ್ಲರೂ ಕಡ್ಡಾಯವಾಗಿ ತಮ್ಮ ಕೋವಿಗಳನ್ನು ಡಿಸೆಂಬರ್ ಅಂತ್ಯದವರೆÀಗೆ ಸನಿಹದ ಠಾಣೆಗಳಲ್ಲ್ಲಿ ತಂದಿರಿಸಬೇಕಾಗಿದೆ. ಕರ್ನಾಟಕ ಆಯುಧಗಳ ಅಧಿನಿಯಮದಡಿಯಲ್ಲಿ ಈ ಆದೇಶಗಳನ್ನು ಹೊರಡಿಸಲಾಗಿದೆ.

ತಾ. 7 ರಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕೆಲವು ಮಹತ್ವದ ಸೂಚನೆಗಳ ಪತ್ರದಲ್ಲಿ ಈ ಕುರಿತು ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ. ಸಾರ್ವಜನಿಕರು ಹೊಂದಿರುವ ಆಯುಧಗಳನ್ನು ಚುನಾವಣೆಗಳು ಮುಕ್ತಾಯವಾಗುವವರೆಗೆ ಪೆÇಲೀಸ್ ಠಾಣೆಗೆ ಹಿಂತಿರುಗಿಸುವ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ

(ಮೊದಲ ಪುಟದಿಂದ) ಪ್ರದೇಶದ ಬಂದೂಕು ಪರವಾನಗಿ ಹೊಂದಿರುವವರು ಗಮನಿಸುವಂತೆ ಜಿಲ್ಲಾಧಿಕಾರಿ ಮಾಹಿತಿಯಿತ್ತಿದ್ದಾರೆ. ಅಲ್ಲದೆ, ತಾ. 8 ರಂದು (ಇಂದು) ಸಂಜೆ 5 ಗಂಟೆಯ ಒಳಗಾಗಿ ಸಂಬಂಧಪಟ್ಟ ಪೆÇಲೀಸ್ ಠಾಣೆಯಲ್ಲಿ ಠೇವಣಿ ಇರಿಸಲು ಆದೇಶ ಹೊರಡಿಸಲಾಗಿರುವದನ್ನು ಖಚಿತಪಡಿಸಿದ್ದಾರೆ. ಬಂದೂಕುಗಳು ತಾ. 31ರ ವರೆಗೆ ಠೇವಣಿಯಲ್ಲಿರಿಸಬೇಕೆಂದು ಸೂಚಿಸಲಾಗಿದೆ. ಪ್ರತಿ ಬಾರಿ ಚುನಾವಣಾ ಸಮಯದಲ್ಲಿ ಅನುಸರಿಸುತ್ತಿದ್ದಂತೆ ಈ ಬಾರಿಯೂ ಸಹ ಆದೇಶ ಹೊರಡಿಸಲಾಗಿರುವದಾಗಿ ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಆ ಜಿಲ್ಲೆಯ ಕೃಷಿಕರು ಕೋವಿಗಳನ್ನು ಠೇವಣಿ ಇಡುವದಕ್ಕೆ ವಿನಾಯತಿ ಕಲ್ಪಿಸಿರುವ ಬಗ್ಗೆ ‘ಶಕ್ತಿ’ ಕೊಡಗು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ‘ಚುನಾವಣಾ ಆಯೋಗದ ಆದೇಶವನ್ನಷ್ಟೆ ತಾನು ಪಾಲನೆ ಮಾಡಲು ಸಾಧ್ಯ’ ಎಂದು ಸ್ಪಷ್ಟಪಡಿಸಿದರು.