ಮಡಿಕೇರಿ, ಡಿ. 7: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2020-21 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ನವೀಕರಣ/ ಹೊಸ ಅರ್ಜಿಗಳನ್ನು ಸಲ್ಲಿಸಲು ನವಂಬರ್ 30 ಕೊನೆಯ ದಿನಾಂಕವೆಂದು ಸೂಚಿಸಲಾಗಿತ್ತು,

ಸದ್ಯ ಅರ್ಜಿ ಸಲ್ಲಿಸಲು ತಾ. 31 ರವರೆಗೆ ವಿಸ್ತರಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (1 ರಿಂದ 10ನೇ ತರಗತಿ)/ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ (ಪಿ.ಯು.ಸಿ.ಯಿಂದ ಪಿ.ಎಚ್.ಡಿ) ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನವು ಆನ್‍ಲೈನ್ hಣಣಠಿ://ತಿತಿತಿ.sಛಿhoಟಚಿಡಿshiಠಿs.gov.iಟಿ ಮೂಲಕ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.ಟಿiಛಿ.iಟಿ ಅನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ: 08272-225528/220214ನ್ನು ಸಂಪರ್ಕಿಸಬಹುದು. ಇಲಾಖಾ ವೆಬ್‍ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.ಟಿiಛಿ.iಟಿ ನಿಂದ ಅಲ್ಪಸಂಖ್ಯಾತರ ಎಲ್ಲಾ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮತ್ತು ಇತರೆ ಸೌಲಭ್ಯಗಳ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಿಂಗರಾಜಪ್ಪ ಅವರು ತಿಳಿಸಿದ್ದಾರೆ.