ಕರಿಕೆ, ಡಿ. 7: ಇಲ್ಲಿನ ಸ.ಹಿ.ಪ್ರಾ.ಶಾಲೆ,ಕರಿಕೆ ಕಾಲೋನಿಯಲ್ಲಿ ಲಾಕ್‍ಡೌನ್ ಅವಧಿಯಿಂದ ಶಾಲೆ ತೆರೆಯದೆ ಶಾಲಾ ಆವರಣದ ಸುತ್ತ ಕಾಡು ಬೆಳೆದುಕೊಂಡಿತ್ತು, ಇದನ್ನು ಮನಗಂಡ ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು, ಪೆÇೀಷಕರು ಹಾಗೂ ಶಿಕ್ಷಕರು ಇಡೀ ಆವರಣದ ಕಾಡು ಕಡಿದು ಶ್ರಮದಾನದ ಮೂಲಕ ಶುಚಿಗೊಳಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಕೊಠಡಿಗಳನ್ನು ಶುಚಿಗೊಳಿಸಿ ಅಂದಗೊಳಿಸಲಾಯಿತು. ಈ ಕಾರ್ಯದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿ. ಕೃಷ್ಣನಾಯ್ಕ, ಸದಸ್ಯರು, ಶಾಲಾ ಮುಖ್ಯ ಶಿಕ್ಷಕ ಕುಮಾರ್, ಎನ್‍ಎಸ್‍ಎಸ್ ಶಿಕ್ಷಕಿ ಮಹಾಲಕ್ಷ್ಮಿ ಪಾಲ್ಗೊಂಡಿದ್ದರು.