ವೀರಾಜಪೇಟೆ ವರದಿ, ಡಿ. 6: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಒಂದು ದಿನದ ಸಾಂಘಿಕ್ ಸೇವಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವೀರಾಜಪೇಟೆ ನಗರ ಶಾಖೆಯ ವತಿಯಿಂದ ನಗರದ ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಯಿತು.

ಕೊರೊನಾ ಸೋಂಕಿನಿಂದ ಶಾಲೆಗಳು ಬಂದ್ ಮಾಡಿರುವ ಹಿನ್ನೆಲೆ ಶಾಲೆಗಳ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಅಶುಚಿತ್ವವಾಗಿತ್ತು. ಶಾಲೆಯ ಕೊಠಡಿಗಳು ದೂಳಿನಿಂದ ಆವೃತ್ತವಾಗಿತ್ತು ಇದನ್ನು ಮನಗಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಒಂದು ದಿನದ ಶುಚಿತ್ವ ಕಾರ್ಯ ನಡೆಸಲಾಯಿತು. ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕ್ಷೇತ್ರ ಶೀಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಗರ ಶಾಖೆಯ ಸ್ವಯಂ ಸೇವಕರು ಸೇವಾ ಕಾರ್ಯ ಮಾಡುವ ಮೂಲಕ ಶುಚಿಗೊಳಿಸಿದರು. ಸೇವಾ ಕಾರ್ಯದಲ್ಲಿ ನಗರ ಸಮಿತಿಯ ಸ್ವಯಂ ಸೇವಕರು ಪಾಲ್ಗೊಂಡಿದ್ದರು.