ನಾಪೋಕ್ಲು, ಡಿ. 6: ನಾಪೋಕ್ಲು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿ ಲೋಕೇಶ್ ಹಾಗೂ ಸುತಾನ್ ಎಂಬವರುಗಳ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ನರಿಯಂದಡ ಗ್ರಾಮದ ಹೊಳೆಯಲ್ಲಿ ಹಾಗೂ ಚೆರಿಯಪರಂಬುವಿನಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ನಾಪೋಕ್ಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದÀು ಠಾಣಾಧಿಕಾರಿ ಆರ್. ಕಿರಣ್, ಸಿಬ್ಬಂದಿಗಳಾದ ಹರ್ಷ, ಗಣೇಶ್, ನವೀನ್ ಮಹೇಶ್ ಹಾಗೂ ಪ್ರಸನ್ನ ಪಾಲ್ಗೊಂಡಿದ್ದರು.