ನಾಪೆÇೀಕ್ಲು, ಡಿ. 6: ಕೊಡಗು ರಾಜ ನಿರ್ಮಿಸಿದ ನಾಲ್ಕುನಾಡು ಅರಮನೆಯ ಮುಖ್ಯ ದ್ವಾರ, ಗೋಪುರ ಮತ್ತು ತಡೆಗೋಡೆ ಕಾಮಗಾರಿಯನ್ನು ರೂ. 28 ಲಕ್ಷ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಈ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆಯ ತಡೆಗೋಡೆ ಕಳೆದ ವರ್ಷದ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ಅದರೊಂದಿಗೆ ಮುಖ್ಯ ದ್ವಾರ ಮತ್ತು ನಾಪೆÇೀಕ್ಲು, ಡಿ. 6: ಕೊಡಗು ರಾಜ ನಿರ್ಮಿಸಿದ ನಾಲ್ಕುನಾಡು ಅರಮನೆಯ ಮುಖ್ಯ ದ್ವಾರ, ಗೋಪುರ ಮತ್ತು ತಡೆಗೋಡೆ ಕಾಮಗಾರಿಯನ್ನು ರೂ. 28 ಲಕ್ಷ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಈ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆಯ ತಡೆಗೋಡೆ ಕಳೆದ ವರ್ಷದ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ಅದರೊಂದಿಗೆ ಮುಖ್ಯ ದ್ವಾರ ಮತ್ತು ನಾಪೆÇೀಕ್ಲು, ಡಿ. 6: ಕೊಡಗು ರಾಜ ನಿರ್ಮಿಸಿದ ನಾಲ್ಕುನಾಡು ಅರಮನೆಯ ಮುಖ್ಯ ದ್ವಾರ, ಗೋಪುರ ಮತ್ತು ತಡೆಗೋಡೆ ಕಾಮಗಾರಿಯನ್ನು ರೂ. 28 ಲಕ್ಷ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಈ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆಯ ತಡೆಗೋಡೆ ಕಳೆದ ವರ್ಷದ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ಅದರೊಂದಿಗೆ ಮುಖ್ಯ ದ್ವಾರ ಮತ್ತು ಲಾಗಿದೆ. ಆದರೆ, ನೂತನವಾಗಿ ತಡೆಗೋಡೆ ನಿರ್ಮಿಸುವ ಬಳಿಯಲ್ಲಿ ಕಾಡು ಮರವೊಂದು ಬೆಳೆದಿದ್ದು, ಅದರ ಬುಡದಲ್ಲಿಯೇ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಮರದ ಬೇರು ತಡೆಗೋಡೆಯ ಒಳ ಸೇರಿದರೆ ತಡೆಗೋಡೆ ಮತ್ತೆ ಬಿರುಕುಬಿಟ್ಟು ಹಾನಿಗೊಳಗಾಗಲಿದೆ. ಅದರೊಂದಿಗೆ ಈ ಮರದ ಕೊಂಬೆಗಳು ಸಮೀಪದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಛಾವಣಿ ಬಳಿಯಿದ್ದು, ಇದು ಮುರಿದುಬಿದ್ದರೆ ಶಾಲೆಗೂ ಹಾನಿ ಸಂಭವಿಸಲಿದೆ ಎನ್ನುತ್ತಾರೆ ಗ್ರಾಮಸ್ಥರು.

(ಮೊದಲ ಪುಟದಿಂದ)

ಹಿಂಬದಿ ತಡೆಗೋಡೆ ಹಾಗೂ ಅರಮನೆ ಛಾವಣಿ ಬಳಿ ಒಣಗಿದ ಮರವೊಂದಿದೆ. ಅದನ್ನು ತೆರವುಗೊಳಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಮರ ಉರುಳಿಬಿದ್ದರೆ ತಡೆಗೋಡೆ ಅಥವಾ ಅರಮನೆ ಛಾವಣಿಗೆ ಹಾನಿಯಾಗಲಿದೆ ಎನ್ನುತ್ತಿದ್ದಾರೆ ಜನ.

ಕಳಪೆ ಕಾಮಗಾರಿ ಆರೋಪ: ಇಲ್ಲಿ ನಡೆಸಲಾಗುತ್ತಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ಕಪ್ಪು ಮಣ್ಣು ಮಿಶ್ರಿತ ಮರಳನ್ನು ಬಳಸಲಾಗುತ್ತಿದೆ. ಸಿಮೆಂಟ್ ಬಳಕೆ ಅಷ್ಟಕಷ್ಟೆ. ಹಳೇ ಕಲ್ಲುಗಳನ್ನು ಬಳಸಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಸೂಕ್ತ ತನಿಖೆ ನಡೆಸಿ ಕಾಮಗಾರಿ ಕಳಪೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಅರೆಯಡ ಪ್ರಸನ್ನ, ಅರೆಯಡ ರತ್ತು ಚಂಗಪ್ಪ, ಕುಡಿಯರ ರಾಜಾ ಮತ್ತಿತರರು ಆಗ್ರಹಿಸಿದ್ದಾರೆ.

ಪ್ರವಾಸಿಗರ ನೆಚ್ಚಿನ ತಾಣ: ನಾಲ್ಕುನಾಡು ಅರಮನೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೊರೊನಾ ಮಹಾಮಾರಿ ಆಗಮನಕ್ಕೆ ಮೊದಲು ಬೇಸಿಗೆ ರಜಾ ದಿನಗಳಲ್ಲಿ ಇಲ್ಲಿಗೆ ದಿನಕ್ಕೆ 300ರಿಂದ 400 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹಿಂದೆ ರಸ್ತೆ ಕಳಪೆಯಾಗಿತ್ತು. ಈ ಹಿನ್ನೆಲೆ ಕಕ್ಕಬ್ಬೆ- ವೀರಾಜಪೇಟೆ ಮುಖ್ಯ ರಸ್ತೆಯ ಕೈಕಂಬದಿಂದ ಅರಮನೆವರೆಗೆ ರೂ. 3.60 ಕೋಟಿ ವೆಚ್ಚದಲ್ಲಿ ಉತ್ತಮ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಈಗ ತಡೆಗೋಡೆ, ದ್ವಾರ, ಗೋಪುರದ ಕಾಮಗಾರಿಯೂ ಆರಂಭವಾಗಿದೆ. ಈ ಹಿಂದೆ ನಿರ್ಮಿಸಿದ ಶೌಚಾಲಯವನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಿದರೆ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಮತ್ತು ಪ್ರವಾಸಿಗರಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. -ಪಿ.ವಿ.ಪ್ರಭಾಕರ್