ಗೋಣಿಕೊಪ್ಪ ವರದಿ, ಡಿ. 4 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿ ಕರ್ನಾಟಕ, ಹಾಕಿ ಕೂರ್ಗ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸಹಯೋಗದಲ್ಲಿ ನಡೆಯುತ್ತಿರುವ ‘ಫೇವ್ ಎಸೈಡ್’ ರಿಂಕ್ ಹಾಕಿ ಟೂರ್ನಿಯ ಎರಡನೇ ದಿನದ ಪಂದ್ಯಗಳಲ್ಲಿ 13 ತಂಡಗಳು ಗೆಲುವು ಕಂಡವು.

ಅಂಜಿಕೇರಿ ನಾಡ್‍ಗೆ ಆರ್ವಿ ಅಕಾಡೆಮಿ ವಿರುದ್ಧ 10-1 ಗೋಲುಗಳ ಭರ್ಜರಿ ಗೆಲುವು ದೊರೆಯಿತು. ಅಂಜಿಕೇರಿ ತಂಡದ ಸೋಮಣ್ಣ 3, ಮಣಿ 2, ಮಂಜುನಾತ್ 2, ಸುಬ್ಬಯ್ಯ, ಹೇಮಂತ್, ಪೊನ್ನಪ್ಪ, ಆರ್ವಿ ತಂಡದ ಎಸ್. ಅರುಣ್ ಗೋಲು ಹೊಡೆದರು.

ಯುಎಸ್‍ಸಿ ಬೇರಳಿನಾಡ್ ತಂಡವು ಯುಟಿಎಸ್‍ಸಿ ತಂಡವನ್ನು 10-0 ಗೋಲುಗಳಿಂದ ಮಣಿಸಿತು. ಬೇರಳಿನಾಡ್‍ನ ರಾಹುಲ್ 5, ಲಿಕಿತ್ 3, ಆಭರಣ್, ಶೇಶಗೌಡ ಗೋಲು ಬಾರಿಸಿದರು.

ಪವಿನ್ ಪೊನ್ನಣ್ಣ ಫೌಂಡೇಷನ್ ತಂಡ 9-0 ಗೋಲುಗಳಿಂದ ಡೈನಮೈಟ್ಸ್ ತಂಡವನ್ನು ಸೋಲಿಸಿತು. ವಿಜೇತ ತಂಡದ ಸೋಮಣ್ಣ

3, ಯತೀಶ್ 2, ಭವಿನ್ 2,

ಅದ್ವೈತ್, ಚಿರಂತ್ ಗೋಲುಗಳ ಸರದಾರರಾದರು.

ಎಚ್. ಆರ್‍ಸಿ ತಂಡಕ್ಕೆ ರೈಸಿಂಗ್ ಸ್ಟಾರ್ಸ್ ತಂಡದ ವಿರುದ್ಧ 8-3 ಗೋಲುಗಳ ಜಯ ದೊರೆಯಿತು. ಎಚ್‍ಆರ್‍ಸಿ ತಂಡದ ಗುರುಚರಣ್ 4, ಅರ್ವಿಂದ್ 2, ಶನು, ಅಶೋಕ್, ಸ್ಟಾರ್ ತಂಡದ ಕಾರ್ಯಪ್ಪ 2, ಅಶೋಕ್ ಗೋಲು ಹೊಡೆದರು.

ಜೂಮರ್ಸ್ ತಂಡ ಎಸ್‍ಆರ್‍ಸಿ ತಂಡವನ್ನು 6-4 ಗೋಲುಗಳಿಂದ ಮಣಿಸಿತು. ಜೂಮರ್ಸ್ ತಂಡದ ನಾಚಪ್ಪ, ನಹಿಮುದ್ದೀನ್ ತಲಾ 2, ವೀರ, ಚಿರಂತ್ ತಲಾ 1, ಎಸ್‍ಆರ್‍ಸಿ ತಂಡದ ದೀಕ್ಷಿತ್ 2, ಅರ್ಜುನ್, ಯಶ್ವಂತ್ ಗೋಲು ಹೊಡೆದರು.

ಡೈನಮೈಟ್ಸ್ ತಂಡವು ಮಾವೆನ್ಸ್ ತಂಡವನ್ನು 6-2 ಗೋಲುಗಳಿಂದ ಸೋಲಿಸಿತು. ಡೈನಮೈಟ್ಸ್‍ನ ಮಣಿ 3, ಹರಿ, ಎಮಿಕ್, ಆಂಥೋನಿ, ಮಾವೆನ್ಸ್‍ನ ಕುಶಾಲಪ್ಪ, ನಿಖಿಲ್ ಗೋಲು ಹೊಡೆದರು.

ಪತ್ತಿರಿಯದ್ ತಂಡವು ರೈಸಿಂಗ್ ಸ್ಟಾರ್ ವಿರುದ್ಧ 7-1 ಗೋಲುಗಳಿಂದ ಜಯಿಸಿತು. ಪತ್ತಿರಿಯದ್ ತಂಡದ ಶ್ರಿರಾಗ್ 3, ಶ್ರಿಜಿಲ್ 2, ನಿಶಾಂತ್, ಶ್ಯಾಮ್, ರೈಸಿಂಗ್ ತಂಡದ ಅಖಿಲ್ ಗೋಲು ಹೊಡೆದರು.

ಬೇರಳಿನಾಡ್ ತಂಡವು ಹುಬ್ಬಳ್ಳಿ ಅಕಾಡೆಮಿ ತಂಡವನ್ನು 7-1 ಗೋಲುಗಳಿಂದ ಮಣಿಸಿತು. ಬೇರಳಿನಾಡ್ ತಂಡದ ರಾಹುಲ್ 5, ಆಭರಣ್, ಲಿಕಿತ್, ಹುಬ್ಬಳಿಯ ಹರೀಶ್ ಮುತ್ರಾರ್ ಗೋಲು ಹೊಡೆದರು.

ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ಮಾವೆನ್ಸ್ ತಂಡವನ್ನು 8-0 ಗೋಲುಗಳಿಂದ ಸೋಲಿಸಿತು. ಪವಿನ್ ತಂಡದ ಯತೀಶ್ 3, ಭವಿನ್ 2, ಸೋಮಣ್ಣ, ಅಜಿತ್, ಚಿರಂತ್ ಗೋಲು ಹೊಡೆದರು.

ಮಾರ್ನಿಂಗ್ ಬಾಯ್ಸ್ ಹಾಗೂ ಗುಡೂರ್ ಹಾಕಿ ತಂಡಗಳ ನಡುವಿನ ಪಂದ್ಯದಲ್ಲಿ ಮಾರ್ನಿಂಗ್ ತಂಡವು 11-2 ಗೋಲುಗಳ ಜಯ ಸಾಧನೆ ಮಾಡಿತು. ಮಾರ್ನಿಂಗ್ ತಂಡದ ಚೆಲ್ಸಿ 5, ಅಚ್ಚಯ್ಯ 3, ಗ್ಯಾನ್ 2, ಅಪ್ಪಚ್ಚು 1, ಗುಡೂರ್ ತಂಡದ ತರುಣ್‍ಕುಮಾರ್, ಈಶ್ವರ್ ಗೋಲು ಹೊಡೆದರು.

ಎಸ್‍ಡಬ್ಲ್ಯೂಆರ್ ತಂಡವು ಎಎಸ್‍ಸಿ ತಂಡದ ವಿರುದ್ಧ 10-1 ಗೋಲುಗಳಿಂದ ಜಯಿಸಿತು. ಹುಬ್ಬಳ್ಳಿ ತಂಡದ ವೀರಣ್ಣ 4, ರಾಹುಲ್ 2, ಆಂಜನೇಯ, ಸೋಮಣ್ಣ, ವಿನೀತ್, ಸಂಜಯ್, ಎಎಸ್‍ಸಿ ತಂಡದ