ಶ್ರೀಮಂಗಲ, ಡಿ. 4 : ಭತ್ತ ಕೃಷಿಯನ್ನು ಆಹಾರಕ್ಕಿಂತ ನೀರಿಗಾಗಿ ಕೊಡಗಿನಲ್ಲಿ ಬೆಳೆಯುವ ಅಗತ್ಯತೆ ಇದೆ. ಕೇರಳದಲ್ಲಿ ಭತ್ತದ ಗದ್ದೆಗಳನ್ನು ಕಳೆದುಕೊಂಡ ನಂತರ ಭತ್ತದ ಗದ್ದೆ ರಕ್ಷಿಸಲು ಕಾನೂನು ಮಾಡಲಾಗಿದೆ. ಕೊಡಗಿನಲ್ಲಿ ದಿನೇ ದಿನೇ ಭತ್ತದ ಗದ್ದೆಗಳು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗುತ್ತಿದ್ದು, ಮತ್ತು ಪಾಳು ಬೀಳುತ್ತಿರುವುದು ಆತಂಕಕಾರಿ ವಿಚಾರ. ಆದ್ದರಿಂದ ಜಿಲ್ಲೆಯಲ್ಲಿ ಭತ್ತದ ಕೃಷಿ ಉಳಿಸಿಕೊಳ್ಳಲು ಹಾಗೂ ಪೆÇ್ರೀತ್ಸಾಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಕೃಷಿ ಇಲಾಖೆ ಮತ್ತು ವಿಜ್ಞಾನಿಗಳು ಮಾಡಬೇಕು ಎಂದು ಪೆÇನ್ನಂಪೇಟೆ ಅರಣ್ಯ ವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಕುಶಾಲಪ್ಪ ಅಭಿಪ್ರಾಯ ಪಟ್ಟರು.

ಶಿವಮೊಗ್ಗದ, ಅರಣ್ಯ ವಿದ್ಯಾಲಯದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ, ಮಡಿಕೇರಿಯ ವಿಸ್ತರಣಾ ಶಿಕ್ಷಣ ಘಟಕ, ಯುಕೊ ಸಂಘಟನೆಯ ನಾಡ ಮಣ್ಣ್, ನಾಡ ಕೂಳ್ ಯೋಜನೆ ಸಹಯೋಗದಲ್ಲಿ ನಡೆದ ಭತ್ತದ ನೇರ ಬಿತ್ತನೆ ಬೆಳೆ - ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಾಯವಾಗಲಿದೆ ಎಂದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿದೆರ್Éೀಶಕಿ ಶಬನಾ ಎಂ. ಶೇಕ್ ಅವರು ಭತ್ತವನ್ನು ಸಾಂಕೇತಿಕವಾಗಿ ಕುಯ್ಲು ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊಡಗಿನಲ್ಲಿ ಭತ್ತ ಬೆಳೆಯಲು ಬಹಳಷ್ಟು ಸವಾಲು ಗಳನ್ನು ಎದುರಿಸಿ ಸಾಂಪ್ರಾದಾಯಿಕ ವಾಗಿ ರೈತರು ಮಾಡುತ್ತಿದ್ದಾರೆ. ಕೊಡಗಿನಲ್ಲಿ ಭತ್ತದ ಕೃಷಿಯಿಂದ ದೊಡ್ಡ ಮಟ್ಟದ ಆರ್ಥಿಕ ಲಾಭ ಸಿಗುತ್ತಿಲ್ಲ. ಕಡಿಮೆ ಇಳುವರಿ, ಹವಾಮಾನ ವೈಪರೀತ್ಯ, ಅಧಿಕ ಮಳೆ, ಕಾಡಾನೆ ಹಾವಳಿ, ಗುಡ್ಡದ ನಡುವೆ ಇರುವ ಗದ್ದೆಗಳಲ್ಲಿ ಕೃಷಿ ಮಾಡುವುದು ದೊಡ್ಡ ಸವಾಲಾಗಿದೆ. ಸಣ್ಣ ರೈತರಿಗೆ ಸ್ವಂತ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗದ ಹಿನ್ನೆಲೆ ಬಾಡಿಗೆಗೆ ಸರಕಾರವು ಸಂಘದ ಮೂಲಕ ಒದಗಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಮ್ಮತ್ತಿಯಲ್ಲಿ ಒಂದು ಕೇಂದ್ರವನ್ನು ತೆರೆಯಲಾಗಿದೆ. ಪ್ರಸಕ್ತ ವರ್ಷ ಕೊಡಗಿನ ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿಗೆ ತಲಾ ಒಂದೊಂದು ಕೇಂದ್ರ ಮಂಜೂರಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಕೊಡಗಿನ ಎಲ್ಲಾ ಹಬ್ಬಗಳು ಭೂಮಿ ಹಾಗೂ ಭತ್ತದ ಕೃಷಿಯೊಂದಿಗೆ ಬಾಂಧವ್ಯ ಹೊಂದಿದೆ. ಭತ್ತದ ಕೃಷಿಯೇ ಇಲ್ಲಿನ ಸಂಸ್ಕೃತಿಯಾಗಿದೆ. ಯುಕೊ ಸಂಘಟನೆಯಿಂದ ಹಮ್ಮಿಕೊಂಡಿರುವ ‘ನಾಡ ಮಣ್ಣ್, ನಾಡ ಕೂಳ್’ ಎಂಬ ಪಾಳು ಬಿಟ್ಟ ಗದ್ದೆಗಳಲ್ಲಿ ಮತ್ತೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಮಾಡುವ ಯೋಜನೆಯ ಮೂಲಕ ಬಹಳಷ್ಟು ಗದ್ದೆಗಳಲ್ಲಿ ಕೃಷಿ ಮತ್ತೆ ಆರಂಭವಾಗಿದೆ. ಕೊಡಗಿನಲ್ಲಿ ಗರಿಷ್ಟ 15 ಕ್ವಿಂಟಾಲ್‍ಗಳು ಮಾತ್ರ ಇಳುವರಿ ಬರುತ್ತಿದ್ದು, ಹೊರ ಜಿಲ್ಲೆಗಳಲ್ಲಿ 35ರಿಂದ 45 ಕ್ವಿಂಟಾಲ್ ಇಳುವರಿ ಬರುತ್ತಿದೆ. ಕೊಡಗಿನಲ್ಲಿ ಎಲ್ಲಾ ಪಾಳುಬಿಟ್ಟ ಗದ್ದೆಗಳಲ್ಲಿ ಭತ್ತ ಬೆಳೆಯಲು ಕೊಡಗನ್ನು ವಿಶೇಷ ಆಧ್ಯತಾ ವಲಯ ಎಂದು ಘೋಷಿಸಬೇಕು.

ಇದಾದರೆ ಜಾರ್ಖಂಡ್‍ನಿಂದ ರಾಜ್ಯ ಭತ್ತ ಖರೀದಿಸುವ ಅಗತ್ಯತೆ ಬರುವುದಿಲ್ಲ. ಆದ್ಯತಾ ವಲಯವಾಗಿ ಮಾಡಿ ಪ್ರತಿ ಎಕರೆಗೆ 25 ಸಾವಿರ ಪೆÇ್ರೀತ್ಸಾಹ ಧನ ನೀಡಬೇಕು. ಹೊರ ಜಿಲ್ಲೆಗಳಲ್ಲಿ 10 ಚದರ ಅಡಿಯ ಇಂಗುಗುಂಡಿಗೆ ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅದರ ಬದಲು ಜಿಲ್ಲೆಯ 35 ಸಾವಿರ ಹೆಕ್ಟೇರ್ ಭತ್ತದ ಗದ್ದೆಗಳು ಸ್ವಾಭಾವಿಕವಾಗಿ ಮಳೆ ನೀರನ್ನು ಹಿಡಿದಿಟ್ಟುಕೊಂಡು ಅಂತರ್ ಜಲವನ್ನು ವೃದ್ದಿಸುವ ಇಂಗುಗುಂಡಿಗಳಾಗಿವೆ. ಇದರಿಂದ ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ ಸೇರಿದಂತೆ ಎಲ್ಲಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ರಾಜ್ಯದ ನೀರಿನ ಅಭಾವವನ್ನು ನೀಗಿಸುತ್ತದೆ. ಆದ್ದರಿಂದ ಕೊಡಗನ್ನು ಕೃಷಿ ಆದ್ಯತಾ ವಲಯವಾಗಿ ಪರಿಗಣಿಸುವಂತೆ ಕೃಷಿ ಇಲಾಖೆಯಿಂದ ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸುವಂತೆ ಮನವಿ ಮಾಡಿದರು.

ಯುಕೊ ಸಂಘಟನೆಯ ನಾಡ್ ಮಣ್ಣ್, ನಾಡ ಕೂಳ್ ಯೋಜನೆಯ ಸಂಚಾಲಕ ಚೆಪ್ಪುಡೀರ ಸುಜುಕರುಂಬಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆಗೆ ಆಧುನಿಕ ತಂತ್ರಜ್ಞಾನದ ಕೊಯ್ಲು ಮಾಡುವ ತಲಾ ಒಂದು ಯಂತ್ರಕ್ಕೆ ರೂ. 23 ಲಕ್ಷ ವೆಚ್ಚದಲ್ಲಿ ನಾಲ್ಕು ಯಂತ್ರಗಳನ್ನು ಜಪಾನ್ ದೇಶದಿಂದ ತರಲಾಗುತ್ತಿದೆ. ಇದು ಭಾರತಕ್ಕೆ ಪ್ರಥಮವಾಗಿದ್ದು, ಈ ಯಂತ್ರವು ಭತ್ತದ ಕೊಯ್ಲನ್ನು ಮಾಡಿ ಹುಲ್ಲನ್ನು ಕಂತೆಯಾಗಿ ಕಟ್ಟುತ್ತದೆ. ಇದಲ್ಲದೆ ಭತ್ತ ನೇರ ಬಿತ್ತನೆ ಪದ್ದತಿಯಿಂದ ಹೆಚ್ಚಿನ ಖರ್ಚನ್ನು ಕಡಿಮೆ ಮಾಡಬಹುದು ಕಾರ್ಮಿಕ ಅವಲಂಬನೆ ಶೇ. 90ರಷ್ಟು ಕಡಿತ ವಾಗಲಿದೆ. ಈ ನಿಟ್ಟಿನಲ್ಲಿ ಭತ್ತ ಬೆಳೆಯಲು ರೈತರು ಮುಂದಾಗ ಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಮಡಿಕೇರಿ ಕೃಷಿ ಉಪ ನಿರ್ದೇಶಕ ಕೆ.ರಾಜು, ಕೃಷಿ ತೋಟಗಾರಿಕಾ ವಿಭಾಗದ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ, ವೀರಾಜಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಮೂರ್ತಿ, ಕೃಷಿ ಅಧಿಕಾರಿ ರೀನಾ, ಕ್ಷೇತ್ರ ಅಧೀಕ್ಷಕ ಡಾ. ಜಿ.ಎನ್. ಹೊಸಗೌಡ್ರು, ಪ್ರಧಾನ ಸಂಶೋಧಕರು ಡಾ. ಬಸವಲಿಂಗಯ್ಯ, ಕೆವಿಕೆ ವಿಜ್ಞಾನಿಗಳಾದ ಪ್ರಭಾಕರ್, ದೇವಯ್ಯ ಹಾಜರಿದ್ದರು.