ಮಡಿಕೇರಿ, ಡಿ. 4: ದೇವಣಗೇರಿಯ ನಿವಾಸಿ ತುಳಸಿ (27) ಎಂಬವರು ನಾಪತ್ತೆಯಾಗಿದ್ದು, ಈಕೆಯ ತಾಯಿ ಪಾರ್ವತಿ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಳಸಿಯ ಪತಿ ಸುನಿಲ್ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ತುಳಸಿ ದೇವಣಗೇರಿಯಲ್ಲಿ ಅತ್ತೆ ಲತಾ ಅವರು ಹಾಗೂ ಆಕೆಯ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ನವೆಂಬರ್ 27 ರಂದು ಮನೆಯಿಂದ ನಾಪತ್ತೆಯಾಗಿದ್ದು, ಇನ್ನೂ ಕೂಡ ಪತ್ತೆಯಾಗಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆ ಪತ್ತೆಯಾದಲ್ಲಿ ವೀರಾಜಪೇಟೆ ಠಾಣೆ ಮೊ. 08274- 257462ಗೆ ಕರೆ ಮಾಡಲು ಕೋರಿದೆ.