ಕೂಡಿಗೆ, ಡಿ. 4: ರಾಜ್ಯದಲ್ಲಿ ಪ್ರಥಮವಾಗಿ ಅರಂಭಗೊಂಡ ಇಲ್ಲಿನ ಹಾಕಿ ತರಬೇತಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಹಾಕಿ ಟರ್ಫ್ ಮೈದಾನದ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕಾಮಗಾರಿಯು ಪ್ರಾರಂಭವಾಗಿ ಮೂರು ವರ್ಷಗಳು ಕಳೆದಿವೆ. ಈ ಸಾಲಿನಲ್ಲಿ ಕಾಮಗಾರಿಯು ಶೇಕಡಾ 95 ರಷ್ಟು ಮುಗಿದಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ. ಇದರ ಹಿನ್ನೆಲೆಯಲ್ಲಿ ಹಾಕಿ ಮೈದಾನಕ್ಕೆ ನೀರು ಹಾಕುವ ಪ್ರಾತ್ಯಕ್ಷತೆ ನಡೆಯಿತು.
ಅಂದಾಜು 4 ಕೋಟಿ ಹಣದಲ್ಲಿ ಕಾಮಗಾರಿಯು ನಡೆಯುತ್ತಿದೆ. ಅದರಲ್ಲಿ ಕೊನೆಯ ಹಂತದ ಭಾಗವಾದ ಕೃತಕ ಹುಲ್ಲಿನ ಮೈದಾನಕ್ಕೆ ಆಟದ ಅಭ್ಯಾಸ ಮಾಡುವ ವೇಳೆಗೆ ಲಕ್ಷಗಟ್ಟಲೆ ಲೀಟರ್ ನೀರನ್ನು ಹಾಕುವ ಯಂತ್ರ ಜೋಡಣೆ ಮಾತ್ರ ಬಾಕಿಯಾಗಿತ್ತು. ಇದೀಗ. ಅದರ ಜೋಡಣೆಯು ಮುಕ್ತಾಯಗೊಂಡಿದೆ.
ಭಾರತ ಹಾಕಿ ಫೆಡರೇಶನ್ ಸಂಸ್ಥೆಯವರು ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರತ ಹಾಕಿ ಫೆಡರೇಶನ್ಗೆ ನೀಡಲಿದ್ದಾರೆ.