ವೀರಾಜಪೇಟೆ, ಡಿ. 5: ಕೊರೊನಾದಂತ ಇನ್ನಿತರ ಮಾರಕ ರೋಗಗಳಿಗೆ ಚಿಕಿತ್ಸೆ ನೀಡುವ ವೈರೋಬೋಟ್ ಹೆಸರಿನ ರೋಬೋಟ್ ಆವಿಷ್ಕಾರವನ್ನು ಕೊಡಗಿನ ವೀರಾಜಪೇಟೆಯ ಯುವಕ ಕಂಡು ಹಿಡಿದು ಜಿಲ್ಲೆಯ ಕೀರ್ತಿಯನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ಸವದತ್ತಿ ತಾಲೂಕಿನ ಮಣಿಕಂಠ ಎಸ್. ಸಾಧನೆ ಮಾಡಿದ ಛಲಗಾರ.

ಪ್ರಸ್ತುತ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ 5ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಮಣಿಕಂಠ ಎಸ್.ಗೆ ಐ.ಇ.ಇ.ಇ ಇಂಡಿಯನ್ ಕೌನ್ಸಿಲ್ ಸಂಸ್ಥೆ ಕೋವಿಡ್ 19 ಸೋಂಕು ನಿಯಂತ್ರಣ ಹಾಗೂ ಸೋಂಕಿತ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬಹುದು ಎನ್ನುವ ಆವಿಷ್ಕಾರವನ್ನು ಮಾಡಬೇಕು. ಅದಕ್ಕೆ ತಗುಲುವ ವೆಚ್ಚವನ್ನು ಸಂಸ್ಥೆ ಭರಿಸುತ್ತದೆ ಎಂಬ ಸಂದೇಶವನ್ನು ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಮ್ಮ ಮನಸ್ಸಿನಲ್ಲಿರುವ ಕಲ್ಪನೆಗಳನ್ನು ಸಂಶೋಧನಾ ಲೇಖನ ಹಾಗೂ ಆವಿಷ್ಕಾರವನ್ನು ಮಾಡುವಂತೆ ತಿಳಿಸಲಾಯಿತು. ಮಣಿಕಂಠ ತನ್ನ ಮನಸ್ಸಿನಲ್ಲಿರುವ ಕಲ್ಪನೆಗೆ ಅನುಸಾರವಾಗಿ ಕೊರೊನಾ ಸೋಂಕಿತರಿಗೆ ರೋಬೋಟ್ ಮೂಲಕ ಯಾವ ರೀತಿ ಚಿಕಿತ್ಸೆ ನೀಡಬಹುದು ಎಂಬ ಆವಿಷ್ಕಾರವನ್ನು ತಯಾರಿಸಿ ಪ್ರತಿದಿನ ನಡೆಸಿದ ಸಂಶೋಧನೆಯನ್ನು ಐ.ಇ.ಇ.ಇ. ಸಂಸ್ಥೆಗೆ ತಿಳಿಸುತ್ತಿದ್ದರು. ಆವಿಷ್ಕಾರ ಪೂರ್ಣಗೊಂಡ ಬಳಿಕ ಸಂಶೋಧನಾ ಲೇಖನ ಬರೆದು ಆಯೋಜಕರ ಮುಂದೆ ನೀಡಲಾಯಿತು. ನನ್ನ ಸಂಶೋಧನಾ ಲೇಖನ ಹಾಗೂ ಆವಿಷ್ಕಾರ ಆಯ್ಕೆ ಆಯಿತು.

(ಮೊದಲ ಪುಟದಿಂದ) ಪರಿಶ್ರಮ ಹಾಗೂ ಆವಿಷ್ಕಾರಕ್ಕೆ ಮನ್ನಣೆ ನೀಡಿ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಆವಿಷ್ಕಾರದ ಬಗ್ಗೆ ಯಾವುದೇ ಸಂಸ್ಥೆಯಿಂದ ಪೇಟೆಂಟ್ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು ಎಂದರು. ಐ.ಇ.ಇ.ಇ. ಸಂಸ್ಥೆಗೆ ನೀಡಲಾದ ಸಂಶೋಧನಾ ಲೇಖನ ಮತ್ತು ಆವಿಷ್ಕಾರಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಹಾಕಾಂಗ್‍ನ ಇಂಟರ್‍ನ್ಯಾಷನಲ್ ಜನರಲ್ ಆಫ್ ವಯರ್‍ಲೆಸ್ ಅಂಡ್ ಮ್ಯೆಕ್ರೋಟೆಕ್ನಾಲಜಿ ಅಂತರ್ರಾಷ್ಟ್ರೀಯ ಸಂಸ್ಥೆ ಡಿಸೆಂಬರ್ 8 ರಂದು ಅಂತರ್‍ಜಾಲದಲ್ಲಿ ಬಿತ್ತರ ಮಾಡುತ್ತಿದೆ.

ಬಳಸುವ ವಿಧಾನ : ವೈರೊಬೋಟ್ ಅನ್ನು ಅಂತರ್‍ಜಾಲ ಹಾಗೂ ಮೊಬೈಲ್‍ನಲ್ಲಿ ನಿಯಂತ್ರಿಸಬಹುದು. ಮೊಬೈಲ್‍ನಲ್ಲಿ ಒಂದು ಆಪ್‍ನ್ನು ತಯಾರಿಸಲಾಗಿದೆ. ರೋಗಿ ಇರುವ ಸ್ಥಳ ಹಾಗೂ ವೈದ್ಯರು ಇರುವ ಸ್ಥಳಕ್ಕೆ ಒಂದು ಕಪ್ಪು ಲೈನ್ ಹಾಕಿಕೊಳ್ಳಬೇಕು. ವೈರೋಬೋಟ್ ಸೆನ್ಸಾರ್ ಮೂಲಕ ಗುರುತಿಸಿ ರೋಗಿಯ ಬಳಿ ತೆರಳಿ ಹೃದಯ ಬಡಿತ, ದೇಹದ ಉಷ್ಣತೆಯನ್ನು ಪರೀಕ್ಷಿಸಿ ವೈದ್ಯರಿಗೆ ಮಾಹಿತಿ ನೀಡುತ್ತದೆ. ವೈದ್ಯರು ನೀಡಿದ ಸಲಹೆ ಮೇರೆಗೆ ಮಾತ್ರೆಗಳನ್ನು ರೋಗಿಗೆ ನೀಡುತ್ತದೆ. ರೋಬೋಟ್‍ಗೆ ಅಲ್ಟ್ರಾವೈಲೇಟ್ ಕಿರಣಗಳನ್ನು ಅಳವಡಿಸಲಾಗಿದ್ದು, ಅದು ರೋಬೋಟ್‍ಗೆ ತಗಲುವ ಕೀಟಾಣು ಮತ್ತು ವೈರಾಣುಗಳನ್ನು ನಾಶಪಡಿಸುತ್ತದೆ.

ವೈರೋಬೋಟ್ ತಯಾರಿಸಲು ಅಂದಾಜು ರೂ. 10 ಸಾವಿರ ವ್ಯಯ ಮಾಡಲಾಗಿದೆ. ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಪಿ.ವಿ.ಸಿ. ಪೈಪ್, ಅಲ್ಯುಮಿನಿಯಂ ತಟ್ಟೆ, ಮೋಟಾರ್, ಸಣ್ಣ ಸಣ್ಣ ಸ್ಪೀಕರ್‍ಗಳು, ಕ್ಯಾಮರಾ, ಅಲ್ಟ್ರಾವೈಲೇಟ್ ಕಿರಣಗಳು ಹಾಗೂ ಸೆನ್ಸಾರ್‍ಗಳನ್ನು ಬಳಕೆ ಮಾಡಲಾಗಿದೆ.

ಇವರು ಒಂಓIಖಿಇSಐಂ-ಖಿಇಅಊ ಒಂದು ಯೂಟ್ಯೂಬ್ ಚಾನಲ್‍ನ್ನು ಪ್ರಾರಂಭಿಸುತ್ತಿದ್ದು, ಅದರಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಪ್ರಾಜೆಕ್ಟ್ ರಿಪೋರ್ಟ್‍ಗಳನ್ನು ಯಾವ ರೀತಿ ತಯಾರಿಸಬೇಕು ಎಂದು ಕನ್ನಡ ಭಾಷೆಯಲ್ಲಿ ತಿಳಿಸಿಕೊಡಲಿದ್ದಾರೆ.

ಈ ಯುವಕನ ತಂದೆ ನಿವೃತ ಸೈನಿಕ ಅಮರೇಶ್ ಸವದತ್ತಿ. ಪ್ರಸ್ತುತ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಪ್ರಥಮ ದÀರ್ಜೆ ಸಹಾಯಕ, ತಾಯಿ ಅನ್ನಪೂರ್ಣ ಅವರು ಓರ್ವ ಗೃಹಿಣಿ, ತಮ್ಮ ಅಭಿಲಾಷ್ ಸಂತ ಅನ್ನಮ್ಮ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ.

ವೀರಾಜಪೇಟೆಯಲ್ಲಿ 1 ರಿಂದ 10 ರವರೆಗೆ ವಿನಾಯಕ ಶಾಲೆ, ಪಿಯುಸಿ ಸಂತ ಅನ್ನಮ್ಮ ಕಾಲೇಜು, ಇಂಜಿನಿಯರಿಂಗ್ ಮಂಡ್ಯದ ಪಿಯಿಎಸ್ ಕಾಲೇಜಿನಲ್ಲಿ ಇವರು ವ್ಯಾಸಂಗ ಮಾಡಿದ್ದಾರೆ.