ಮಡಿಕೇರಿ, ಡಿ.5: ಸಕಾಲ ಸಪ್ತಾಹ ಪ್ರಯುಕ್ತ ನಗರಸಭೆ ವತಿಯಿಂದ ಶನಿವಾರ ಜಾಗೃತಿ ಜಾಥಾ ನಡೆಯಿತು. ನಗರಸಭೆಯಿಂದ ಹೊರಟ ಜಾಥಾವು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತÀ, ಸ್ಕ್ವಾಡ್ರರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಸಾಗಿತು.ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಮಾತನಾಡಿ ನಾಗರಿಕರಿಗೆ ಕಾಲ ಮಿತಿಯಲ್ಲಿ ಪೌರಾಡಳಿತ ಇಲಾಖೆಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆ ಜಾರಿಗೊಳಿಸಲಾಗಿದ್ದು, ಸಕಾಲದಡಿ ಅರ್ಜಿ ಸಲ್ಲಿಸಿದ್ದಲ್ಲಿ ಕಾಲ ಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು. (ಮೊದಲ ಪುಟದಿಂದ) 2018 ರಿಂದ ಫಾರ್ಮ್ ನಂಬರ್ 3 ರಡಿ 450 ಅರ್ಜಿಗಳು ಬಾಕಿ ಇದ್ದವು, ಕಳೆದ ಎರಡು ತಿಂಗಳಲ್ಲಿ 410 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಯಾವುದೇ ರೀತಿಯ ಕುಂದುಕೊರತೆಗೆ ಸಂಬಂಧಿಸಿದಂತೆ ನೇರವಾಗಿ ನಗರಸಭೆಗೆ ಭೇಟಿ ನೀಡಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಗರಸಭೆ ಕರ್ತವ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ನಗರಸಭೆ ಎಇಇ ರಾಜೇಂದ್ರ, ವ್ಯವಸ್ಥಾಪಕರಾದ ಸುಜಾತ, ನಗರಸಭೆ ಲೆಕ್ಕಾಧಿಕಾರಿ ತಾಹಿರ್, ನಾಗರಾಜು ಇತರರು ಇದ್ದರು.ಎರಡು ತಿಂಗಳಲ್ಲಿ 410 ಅರ್ಜಿ ವಿಲೇವಾರಿ; ಎಸ್.ವಿ.ರಾಮದಾಸ್