ಕುಶಾಲನಗರ, ಡಿ. 4: ಕುಶಾಲನಗರ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಂಡೇಪಂಡ ಬೋಸ್ ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ 2021-23ನೇ ನೂತನ ಸಾಲಿನ ಪದಾಧಿಕಾರಿಗಳಿಗೆ ಚುನಾವಣೆ ನಡೆದು ಉಪಾಧ್ಯಕ್ಷರಾಗಿ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಕಾರ್ಯದರ್ಶಿಯಾಗಿ ಅಯಿಲಪಂಡ ಸಂಜು, ಖಜಾಂಚಿಯಾಗಿ ಅಲ್ಲಾರಂಡ ವಾಸು ಚಂಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಚೋವಂಡ ಅನಿತಾ ಕಾರ್ಯಪ್ಪ, ನಿರ್ದೇಶಕರಾಗಿ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ.