ಸುಂಟಿಕೊಪ್ಪ : ಇಲ್ಲಿಗೆ ಸಮೀಪದ 7ನೇ ಹೊಸಕೋಟೆÀ ಗ್ರಾಮದ ರೈತರ ಗದ್ದೆಗಳಿಗೆ ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟವಾಗಿದೆ.

ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಬಾಳೆ ತೋಟಗಳನ್ನು ಧÀ್ವಂಸಗೊಳಿಸಿ ಭಾರೀ ಪ್ರಮಾಣದಲ್ಲಿ ರೈತರ ಕೃಷಿಗಳನ್ನು ನಷ್ಟಪಡಿಸಿವೆ. ಗ್ರಾಮದ ಬಾಸ್ಕರ ರೈ ಎಂಬವರ ಗದ್ದೆಯಲ್ಲಿ ಕಟಾವಿಗೆ ಬಂದಿದ್ದ ಭತ್ತದ ಪೈರುಗಳನ್ನು ತಿಂದು ಧÀ್ವಂಸಗೊಳಿಸಿದ್ದು, ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ರಾತ್ರಿ ವೇಳೆ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಮೆಟ್ನಳ್ಳಿ ಸೇತುವೆ ಸಮೀಪ ಆನೆಕಾಡು ಅರಣ್ಯದಿಂದ ಕಾಡಾನೆಗಳು ಬರುತ್ತಿದ್ದು, ಈ ಭಾಗದಲ್ಲಿ ವಾಸ ಮಾಡುವÀ ಮನೆಯವರು ಭಯದಿಂದ ಕಾಲ ದೂಡುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.