ಶ್ರೀಮಂಗಲ, ಡಿ. 4: ಸುಮಾರು 45 ವರ್ಷಗಳಿಂದ ಆಚರಣೆ ಇಲ್ಲದೆ ಸ್ಥಗಿತವಾಗಿದ್ದ ದಕ್ಷಿಣ ಕೊಡಗಿನ ನಾಲ್ಕೇರಿ ಗ್ರಾಮದ ಊರ್‍ಮಂದನ್ನು ಗ್ರಾಮಸ್ಥರು ಪುನರಾರಂಭಿಸಿದ್ದು, ಮಂದ್‍ನಲ್ಲಿ ಸಾಂಪ್ರಾದಾಯಿಕ ಪುತ್ತರಿ ಕೋಲ್ ಮಂದ್ ಆಚರಿಸುವ ಮೂಲಕ ವೈಭವ ಮರುಕಳಿಸಿದೆ. ಹಲವು ಕಾರಣಗಳಿಂದ 1974ರಲ್ಲಿ ಸ್ಥಗಿತವಾಗಿದ್ದ ಊರ್ ಮಂದ್ ಪ್ರಸಕ್ತ ವರ್ಷದ ಪುತ್ತರಿ ಕೋಲ್‍ಮಂದ್ ಮೂಲಕ ಆರಂಭವಾಗಿದ್ದು, ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು, ಯುವಕರು ಮತ್ತು ಹಿರಿಯರು ಆಗಮಿಸಿ ಮಂದ್‍ನ ಹಿಂದಿನ ವೈಭವ ಮರುಕಳಿಸಿರು
ವುದನ್ನು ಕಣ್ತುಂಬಿಕೊಂಡು ಹೆಮ್ಮೆಪಟ್ಟರು. ಯುಕೋ ಸಂಘಟನೆಯ ಮಂದ್ ನಮ್ಮೆಯಿಂದ ಪ್ರೇರಿತರಾಗಿ ಜಿಲ್ಲೆಯ ಹಲವೆಡೆ ಆಚರಣೆ ಇಲ್ಲದೇ ಮುಚ್ಚಿ ಹೋಗಿರುವ ಹಲವು ಮಂದ್‍ಗಳು ಮತ್ತೆ ತೆರೆಯಲಾಗಿದ್ದು, ಮಂದ್‍ನ ಮಹತ್ವ ಅರಿತು ಗ್ರಾಮದ ಯುವಕರ ತಂಡ ಯುಕೋ ಸಂಘಟನೆಯ ಸಲಹೆ ಮಾರ್ಗದರ್ಶನ ಪಡೆದು ನಾಲ್ಕೇರಿ ಮಂದನ್ನು ಮತ್ತೆ ತೆರೆಯಲು ಶ್ರಮಿಸಿ ಯಶ್ವಸಿಯಾಗಿದೆ.
ಮಂದ್ ಪ್ರಯುಕ್ತ ಸಾಂಪ್ರಾ ದಾಯಿಕವಾಗಿ ಪುತ್ತರಿ ಕೋಲಾಟ ನಡೆಯಿತು. ವಿಶೇಷವಾಗಿ ನಾಲ್ಕೇರಿ ಗ್ರಾಮದ ಯುವಕರ ತಂಡವೆ ಪುತ್ತರಿ ಕೋಲಾಟ ನಡೆಸಿ ಗಮನ ಸೆಳೆಯಿತು. ಇದಲ್ಲದೇ ನಾಲ್ಕೇರಿ ಗ್ರಾಮದ ಉಮ್ಮತ್ತಾಟ್ ತಂಡ, ಕತ್ತಿಯಾಟ್, ಪರೆಯಕಳಿ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ಮಂದ್‍ನಲ್ಲಿ ಹಬ್ಬದ ವಾತಾವರಣ ವನ್ನು ಮೂಡಿಸಿತ್ತು.
ಮಂದ್ ಕಾರ್ಯಕ್ರಮವನ್ನು ತಪ್ಪಡ್ಕ ಕಟ್ಟುವ ಮೂಲಕ ದೇವರಲ್ಲಿ ಪ್ರಾರ್ಥಿಸಿ ಸಾಂಪ್ರಾದಾಯಿಕವಾಗಿ ಆರಂಭಿಸಲಾಯಿತು. ಮಂದ್‍ಗೆ ಗ್ರಾಮದ ತಕ್ಕರಾದ ಕಚ್ಚಪನ್ನೇರ ಮತ್ತು ಮಲ್ಲಪನ್ನೇರ ಕುಟುಂಬಸ್ಥರು ಆಗಮಿಸಿ ಮಂದ್ ಹಿಡಿಯುವ ಮೂಲಕ ಮಂದ್‍ನ
(ಮೊದಲ ಪುಟದಿಂದ) ಸಾಂಪ್ರಾದಾಯಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯರಾದ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅವರು ಮಾತನಾಡಿ ಕಳೆದ 45 ವರ್ಷಗಳಿಂದ ಹಲವು ಕಾರಣಗಳಿಂದ ಮುಚ್ಚಿ ಹೋಗಿದ್ದ ಊರ್‍ಮಂದನ್ನು ಗ್ರಾಮಸ್ಥರು ವಿಶೇಷವಾಗಿ ಗ್ರಾಮದ ಯುವಕರ ತಂಡ ಕಾಳಜಿ ವಹಿಸಿ ತೆರೆದಿರುವುದು ಸಂತೋಷವಾಗಿದೆ.
ಕೊಡವ ಯುವಕರಲ್ಲಿ ತಮ್ಮ ಭೂಮಿ, ಸಂಸ್ಕೃತಿ, ಮಂದ್, ಪರಂಪರೆ ಮತ್ತು ಜನಾಂಗದ ಬಗ್ಗೆ ಮೂಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಇಂದಿನ ಈ ಕಾರ್ಯಕ್ರಮಕ್ಕೆ ಗ್ರಾಮದ ಪ್ರತಿ ಮನೆಯಿಂದ ಕುಟುಂಬ ಸಹಿತ ಆಗಮಿಸಿ ಜನರು ಪಾಲ್ಗೊಂಡಿದ್ದಾರೆ. ಸ್ವಪ್ರೇರಣೆಯಿಂದ ರೂ. 1.25 ಲಕ್ಷದಷ್ಟು ಹಣವನ್ನು ಮಂದ್‍ನ ನಿರ್ವಹಣೆಗಾಗಿ ಗ್ರಾಮಸ್ಥರು ನೀಡಿರುವುದು ಮಂದ್‍ನ ಮೇಲಿರುವ ವಿಶೇಷ ಅಭಿಮಾನ ಸಾರುತ್ತಿದೆ. ಈ ಮಂದನ್ನು ಪ್ರತಿ ವರ್ಷ ಸಾಂಪ್ರಾದಾಯಿಕ ಆಚರಿಸಿಕೊಂಡು ಗ್ರಾಮದ ಒಗ್ಗಟ್ಟಿಗೆ ಮತ್ತು ಸಂಸ್ಕೃತಿ ಪರಂಪರೆ ಮತ್ತು ಜನಾಂಗದ ಬಗ್ಗೆ ಮೂಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಇಂದಿನ ಈ ಕಾರ್ಯಕ್ರಮಕ್ಕೆ ಗ್ರಾಮದ ಪ್ರತಿ ಮನೆಯಿಂದ ಕುಟುಂಬ ಸಹಿತ ಆಗಮಿಸಿ ಜನರು ಪಾಲ್ಗೊಂಡಿದ್ದಾರೆ. ಸ್ವಪ್ರೇರಣೆಯಿಂದ ರೂ. 1.25 ಲಕ್ಷದಷ್ಟು ಹಣವನ್ನು ಮಂದ್‍ನ ನಿರ್ವಹಣೆಗಾಗಿ ಗ್ರಾಮಸ್ಥರು ನೀಡಿರುವುದು ಮಂದ್‍ನ ಮೇಲಿರುವ ವಿಶೇಷ ಅಭಿಮಾನ ಸಾರುತ್ತಿದೆ. ಈ ಮಂದನ್ನು ಪ್ರತಿ ವರ್ಷ ಸಾಂಪ್ರಾದಾಯಿಕ ಆಚರಿಸಿಕೊಂಡು ಗ್ರಾಮದ ಒಗ್ಗಟ್ಟಿಗೆ ಮತ್ತು ಸಂಸ್ಕೃತಿ ‘ಹಿಡ್‍ಕಟ್ಟ್’ ಎಂಬ ಅಲಿಖಿತ ಸಂವಿಧಾನದ ಮೂಲಕ ಕೊಡವಾಮೆಯ ಮೌಲ್ಯಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರಿಸುವಲ್ಲಿ ಮಂದ್‍ಗಳ ಪಾತ್ರ ಪ್ರಮುಖವಾಗಿದೆ ಎಂದರು.
ಮಂದ್ ಸೇರಿದಂತೆ ಕೊಡವರ ಪಾರಂಪರಿಕ ಹಾಗೂ ಧಾರ್ಮಿಕ ಕೇಂದ್ರವಾದ ಐನ್‍ಮನೆ, ವಾಡೆ, ಕೈಮಡ, ಕ್ಯಾಕೊಳ, ಚೂಟ್‍ಂಗಳ, ಮಚನಿಕಾಡ್ ಹಾಗೂ ಜಮ್ಮ ಮುಂತಾದ ಎಲ್ಲಾ ಹೆಗ್ಗುರುತುಗಳನ್ನು ಸಹ ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಚೆರಿಯಪಂಡ ಸಚಿನ್ ಪೆಮ್ಮಯ್ಯ, ತಕ್ಕರುಗಳಾದ ಕಚ್ಚಪನ್ನೇರ ಮದನ್ ಪೂಣಚ್ಚ, ಮಲ್ಲಪನ್ನೇರ ಸುದೀರ್, ಅತಿಥಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸನ್ನು, ವೇಣುಕರುಂಬಯ್ಯ, ಮಲ್ಲಪನ್ನೇರÀ ವಿನುಚಿಣ್ಣಪ್ಪ, ನಾಚಪ್ಪ, ಸಚಿನ್, ಮಧು, ನಿಲು, ಲಿಖಿತ್, ದರ್ಶನ್, ಚೆಪ್ಪುಡಿರ ಕರುಣ್ ದೇವಯ್ಯ, ಕಳ್ಳಂಗಡ ಅನೀಸ್‍ನಾಚಪ್ಪ, ನಿತಿಪೂಣಚ್ಚ, ಗಿರೀಶ್, ದೇಯಂಡ ಶಂಭುಸುಬ್ಬಯ್ಯ, ಮಣಿಕಾಳಯ್ಯ, ಮಾಚಿಮಾಡ ಪ್ರವೀಣ್‍ಉತ್ತಯ್ಯ, ಮುಕ್ಕಾಟಿರ ಅರುಣ್, ಶಶಿ, ವರುಣ್, ತೀತಿರ ಮನುಮಾದಪ್ಪ, ಕೇಚಮಾಡ ಕೃತಿಕುಶಾಲಪ್ಪ, ಶಂಕರಿಕಾಳಯ್ಯ, ಅಲ್ಲುಮಾಡ ನವೀನ್, ಕೀರ್ತಿ, ಶರತ್, ಪ್ರಚನ್‍ಮುತ್ತಪ್ಪ, ತಿಮ್ಮಣ, ಗಿರೀಶ್, ಮಾಚಿಮಾಡ ಮನು, ಕಚ್ಚಪನ್ನೆರ ಪಿನ್ಸ್‍ಅಯ್ಯಪ್ಪ, ಕೊಕ್ಕಲೆಮಾಡ ವೀಟು, ಗಾಂಡಂಗಡ ರಶಿಕ್‍ತಿಮ್ಮಯ್ಯ, ಚಿಮ್ಮಣಮಾಡ ರವಿನರೇಂದ್ರ ಹಾಜರಿದ್ದರು.
- ಹರೀಶ್ ಮಾದಪ್ಪ