ಮಡಿಕೇರಿ, ಡಿ. 5: ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಸೂಚಿಸಿದರು.ನಗರದ ಸಂತ ಜೋಸೆಫರ ಶಾಲೆಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಶನಿವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಚುನಾವಣಾಧಿಕಾರಿ ಅವರು ಚುನಾವಣಾ ಅಧಿಸೂಚನೆ ಹೊರಡಿಸಿದ ದಿನದಿಂದ ಚುನಾವಣಾ ಫಲಿತಾಂಶ ಪ್ರಕಟಿಸುವ ದಿನದವರೆಗೆ ಮತ್ತು ಚುನಾವಣೆ ಸಂಬಂಧ ಉಪಯೋಗಿಸಿದ ದಾಖಲೆಗಳು ಸುರಕ್ಷಿತವಾಗಿ ಇಡುವ ತನಕ, ಎಲ್ಲಾ ಕರ್ತವ್ಯವು ಆರ್‍ಒ ಮತ್ತು ಎಆರ್‍ಒಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಶ್ರದ್ಧೆಯಿಂದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಓದಿಕೊಂಡು ಕಾರ್ಯನಿರ್ವಹಿಸಬೇಕು ಎಂದು ವಿ.ಅನ್ಬುಕುಮಾರ್ ತಿಳಿಸಿದರು.

ಮಡಿಕೇರಿ ತಾಲೂಕು ನೋಡಲ್ ಅಧಿಕಾರಿ ನಿಲೇಶ್ ಸಿಂದೆ, ತಹಶೀಲ್ದಾರ್ ಮಹೇಶ್, ತರಬೇತಿದಾರರಾದ ಕೆ.ಜೆ.ದಿವಾಕರ, ಪ್ರಸಾದ್, ನೋಡಲ್ ಅಧಿಕಾರಿಗಳು, ಆರ್‍ಒ ಮತ್ತು ಎಆರ್‍ಒಗಳು ಇತರರು ಇದ್ದರು. ಅಧಿಕಾರಿಗಳ ನೇಮಕ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿವರ ಇಂತಿದೆ.

ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿಯ ಉಪ ತಹಶೀಲ್ದಾರ್ ದೊರೆ (ಭಾಗಮಂಡಲ ಹೋಬಳಿ) 9741875449, ಸಂಪಾಜೆ ಹೋಬಳಿಯ ಉಪ ತಹಶೀಲ್ದಾರ್ ಮಂಜುನಾಥ್ (ಸಂಪಾಜೆ ಹೋಬಳಿ) 9449208212, ನಾಪೋಕ್ಲು ಹೋಬಳಿಯ ಉಪ ತಹಶೀಲ್ದಾರ್ ಸಿದ್ದರಾಜು (ನಾಪೋಕ್ಲು ಹೋಬಳಿ) 9591590232, ಮಡಿಕೇರಿ ತಾಲೂಕು

(ಮೊದಲ ಪುಟದಿಂದ) ಕಚೇರಿ ಶಿರಸ್ತೇದಾರ್ (ಸಾಮಾಜಿಕ ಭದ್ರತೆ ಯೋಜನೆ) ಬಿ.ಎನ್.ವಿನು (ಮಡಿಕೇರಿ ಗ್ರಾಮಾಂತರ ವ್ಯಾಪ್ತಿ (ಮಡಿಕೇರಿ ನಗರಸಭೆ ವ್ಯಾಪ್ತಿ ಹೊರತುಪಡಿಸಿ) 9482240076,

ಸೋಮವಾರಪೇಟೆ ತಾಲೂಕು ಶಾಂತಳ್ಳಿ ಹೋಬಳಿಯ ಉಪ ತಹಶೀಲ್ದಾರ್ ಧನರಾಜು (ಶಾಂತಳ್ಳಿ ಹೋಬಳಿ) 9148107809, ಶನಿವಾರಸಂತೆ ಹೋಬಳಿಯ ಉಪ ತಹಶೀಲ್ದಾರ್ ಕೆ.ಜಿ.ಮಧುಸೂಧನ (ಶನಿವಾರಸಂತೆ ಹೋಬಳಿ) 9448588060, ಕೊಡ್ಲಿಪೇಟೆ ಹೋಬಳಿಯ ಉಪ ತಹಶೀಲ್ದಾರ್ ಪುರುಷೋತ್ತಮ (ಕೊಡ್ಲಿಪೇಟೆ ಹೋಬಳಿ) 7353487293, ಸುಂಟಿಕೊಪ್ಪ ಹೋಬಳಿಯ ಉಪ ತಹಶೀಲ್ದಾರ್ ಶುಭ (ಸುಂಟಿಕೊಪ್ಪ ಹೋಬಳಿ) 9964319211, ತಾಲೂಕು ಕಚೇರಿ ಶಿರಸ್ತೇದಾರ್ ಸುಶೀಲ (ಕುಶಾಲನಗರ ಹೋಬಳಿ (ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊರತುಪಡಿಸಿ) 9449837407, ತಾಲೂಕು ಕಚೇರಿ ಶಿರಸ್ತೇದಾರ್ ಆರ್.ಮಹೇಶ್ (ಸೋಮವಾರಪೇಟೆ ಹೋಬಳಿ (ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊರತುಪಡಿಸಿ) 9900672869, ವೀರಾಜಪೇಟೆ ತಾಲೂಕು ಹುದಿಕೇರಿ ಹೋಬಳಿಯ ಉಪ ತಹಶೀಲ್ದಾರ್ ಎಂ.ಸಿ.ವೆಂಕಟೇಶ್ (ಹುದಿಕೇರಿ ಹೋಬಳಿ) 9845691131, ಪೊನ್ನಂಪೇಟೆ ಹೋಬಳಿಯ ಉಪ ತಹಶೀಲ್ದಾರ್ ದಾಕ್ಷಾಯಿಣಿ ಎಚ್.ಎನ್. (ಪೊನ್ನಂಪೇಟೆ ಹೋಬಳಿ) (ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹೊರತುಪಡಿಸಿ), ವೀರಾಜಪೇಟೆ ತಾಲೂಕು ಬಾಳೆಲೆ ಹೋಬಳಿಯ ಉಪ ತಹಶೀಲ್ದಾರ್ ಎಂ.ಮಂಜುನಾಥ್ (ಬಾಳೆಲೆ ಹೋಬಳಿ) 9901472659, ಶ್ರೀಮಂಗಲ ಹೋಬಳಿಯ ಉಪ ತಹಶೀಲ್ದಾರ್ ಎ.ಕೆ.ಅಕ್ಕಮ್ಮ (ಶ್ರೀಮಂಗಲ ಹೋಬಳಿ) 953534986, ವೀರಾಜಪೇಟೆ ತಾಲೂಕು ಕಚೇರಿ ಶಿರಸ್ತೇದಾರ್ (ಸಾಮಾಜಿಕ ಭದ್ರತೆ ಯೋಜನೆ) ಆರ್.ಶ್ರೀನಾಥ್ (ಅಮ್ಮತ್ತಿ ಹೋಬಳಿ) 9448753840, ವೀರಾಜಪೇಟೆ ತಾಲೂಕು ಕಚೇರಿ ಶಿರಸ್ತೇದಾರ್ ಸಂಜೀವ್ ಕುಮಾರ್ (ವೀರಾಜಪೇಟೆ ಹೋಬಳಿ) (ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊರತುಪಡಿಸಿ) 8660150449.

ತಹಶೀಲ್ದಾರ್ ಕಚೇರಿಗೆ ಭೇಟಿ

ಮತದಾರರ ಪಟ್ಟಿ ವಿಶೇಷ ವೀಕ್ಷಕರಾದ ವಿ.ಅನ್ಬುಕುಮಾರ್ ಶನಿವಾರ ನಗರದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿ ಸಂಬಂಧಿಸಿದಂತೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ತಹಶೀಲ್ದಾರ್ ಮಹೇಶ್ ಇತರರು ಇದ್ದರು.