ಸೋಮವಾರಪೇಟೆ, ಡಿ. 5: ವಿಶೇಷ ಕಾಫಿಗಳಾದ ಮಾನ್ಸೂನ್ ಮಲಬಾರ್ ರೋಬಸ್ಟಾ ಹಾಗೂ ಅರೇಬಿಕಾ, ಕೊಡಗಿನ ಭೌಗೋಳಿಕ ಸೂಚಕ ಕೂರ್ಗ್ ಅರೇಬಿಕಾ ಕಾಫಿಯ ಬೆಳೆಗಾರರು, ವಹಿವಾಟುದಾರರು, ರಫ್ತುದಾರರು ಹಾಗೂ ರೋಸ್ಟರ್ಸ್ ಇವರುಗಳಿಗೆ, ಕಾಫಿಗಳ ಅಧಿಕೃತ ಚಿಹ್ನೆ ಮತ್ತು ಲಾಂಛನಗಳ ಅಧಿಕೃತ ಬಳಕೆಗೆ ಭಾರತೀಯ ಕಾಫಿ ಮಂಡಳಿಯು ಪರವಾನಗಿ ನೀಡಲಿದೆ.

ಆಸಕ್ತರು ಸ್ಥಳೀಯ ಕಾಫಿ ಮಂಡಳಿಗಳ ನಿರಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು ಚೆನೈನಲ್ಲಿರುವ ಭೌಗೋಳಿಕ ಸೂಚಕ ಕಾಫಿಯ ನೋಂದಾವಣಿ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ತಿಳಿಸಿದ್ದಾರೆ.