ಮಡಿಕೇರಿ, ಡಿ. 5: ಕೊಡಗು ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುಡೂರು ಭೀಮಸೇನ್ ಅವರು ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ. ಇವರು ಗುಲ್ಬರ್ಗಕ್ಕೆ ನಿಯುಕ್ತಿಗೊಂಡಿದ್ದು, ಪ್ರಸ್ತುತ ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ ಅವರು ಪ್ರಭಾರವಾಗಿ ಈ ಜವಾಬ್ದಾರಿಯಲ್ಲಿದ್ದಾರೆ.