ಶನಿವಾರಸಂತೆ, ಡಿ. 5: ಪಟ್ಟಣದ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲ ಭೈರವಿ ದೇವಸ್ಥಾನ ಹಾಗೂ ಪರಿವಾರ ದೇವರ ಸಮಿತಿ ವತಿಯಿಂದ ವಾರ್ಷಿಕೋತ್ಸವ ಪ್ರಯುಕ್ತ ಕಾರ್ತಿಕ ಮಾಸದ ತಾ. 7 ರಂದು ವಿಶೇಷ ಪೂಜೆ ಲೋಕ ಕಲ್ಯಾಣಾರ್ಥ ಹೋಮ ಮತ್ತು ಮಹಾಪೂಜೆ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ಗಂಗೆಪೂಜೆ, ಗೋಪೂಜೆ, ಮಂಗಳಾರತಿ ನಂತರ ಸಹಕಾರ ಬ್ಯಾಂಕ್ ಹತ್ತಿರದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಕಲಶ ಮೆರವಣಿಗೆ ನಡೆಯಲಿದೆ.
9 ಗಂಟೆಗೆ ಶ್ರೀ ಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಸಂಕಲ್ಪ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ. 9.30 ಗಂಟೆಗೆ ಊರು ಒಡೆಯ ದೇವರು, 10 ಗಂಟೆಗೆ ಬಿದರೂರು ಬ್ರಹ್ಮದೇವರು, 10.30 ಗಂಟೆಗೆ ಶ್ರೀ ಬಸವೇಶ್ವರ ದೇವರು, 11 ಗಂಟೆಗೆ ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಶ್ರೀ ಬಸವೇಶ್ವರ ದೇವರು, 11.30 ಗಂಟೆಗೆ ತ್ಯಾಗರಾಜ ಕಾಲೋನಿಯ ಚೌಡೇಶ್ವರಿ ದೇವತೆ, ಮಧ್ಯಾಹ್ನ 12ಕ್ಕೆ ಶ್ರೀ ವಿಜಯ ವಿನಾಯಕ ದೇವರು, 12.30ಕ್ಕೆ ಬನ್ನಿ ಮಂಟಪ, ಪೂಜೆ, 1 ಗಂಟೆಗೆ ಶ್ರೀ ರಾಮ ಮಂದಿರದಲ್ಲಿ ಮಹಾಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿದೆ.
1.30ಕ್ಕೆ ಮುಖ್ಯ ರಸ್ತೆಯಲ್ಲಿರುವ ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ನಡೆಯಲಿದೆ. 2 ಗಂಟೆಗೆ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲ ಭೈರವಿ ದೇವಿ ದೇವಸ್ಥಾನದಲ್ಲಿ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಲಘು ಉಪಹಾರ ಏರ್ಪಡಿಸಲಾಗಿದೆ.
ಅಂದು ಸಂಜೆ 5 ಗಂಟೆಗೆ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲ ಭೈರವಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳಾದ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ ನವಗ್ರಹ ಹಾಗೂ ಮೃತ್ಯುಂಜಯ ಪೂಜೆ, ಹೋಮ, ಗಣಪತಿ ಹೋಮ, ಧನ್ವಂತರಿ ಹೋಮ, ಮೂಲ ದೇವರಿಗೆ ಫಲ, ಪಂಚಾಮೃತ ಅಭಿಷೇಕ, ಏಕವಾರ ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರೋಕ್ಷಣೆ, ಪ್ರಸಾದ ವಿನಿಯೋಗ ಹಾಗೂ ಭಕ್ತಾದಿ ಗಳಿಗೆ ದಾಸೋಹ ಏರ್ಪಡಿಸಲಾಗಿದೆ ಎಂದು ಸೇವಾ ಸಮಿತಿ ಹಾಗೂ ಬಿದರೂರು, ಹೆಮ್ಮನೆ, ಶನಿವಾರಸಂತೆ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.