ಮಡಿಕೇರಿ, ಡಿ. 3: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಸಂಯುಕ್ತ ಆಶ್ರಯದಲ್ಲಿ ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ವಚನ ಗಾಯನ ಕಾರ್ಯಕ್ರಮವನ್ನು ತಾ. 12 ರಂದು ಹಮ್ಮಿಕೊಳ್ಳಲಾಗಿದೆ.

ಗಾಯನದಲ್ಲಿ ಪಾಲ್ಗೊಂಡ ಗಾಯಕರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಚನ ಗೀತೆಗಳನ್ನು ಹಾಡಲು ಆಸಕ್ತಿ ಇರುವವರು ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿ ಲೋಕೇಶ್ ಡಿ.ಪಿ. 9242814868 ಹಾಗೂ ಎಲ್.ಎಂ. ಪ್ರೇಮ 9480995739 ಅವರನ್ನು ಸಂಪರ್ಕಿಸಬಹುದು.